ಆನೇಕಲ್ : ಕಸ ಸಂಸ್ಕರಣಾ ಘಟಕದಲ್ಲಿ ಕೂಡ ರಾಜಕೀಯ ಮಾಡ್ತಿದ್ದಾರೆ ಅವತ್ತು ಯಾರು ಸ್ಥಳ ಪರಿಶೀಲನೆ ಹೋಗಿದ್ದರೋ ?? ಇವತ್ತು ಅವರೇ ಮುಂದೆ ನಿಂತು ವಿರೋಧ ಮಾಡುತ್ತಿರುವುದು ವಿಪರ್ಯಾಸ.
ಕಸ ಸಂಸ್ಕರಣಾ ಘಟಕದಲ್ಲೂ ಕೂಡ ರಾಜಕೀಯ ಮಾಡಬಾರದು ಎಂದು ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ಮುಖಂಡ ಹರೀಶ್ ವಿಷಾದವನ್ನು ವ್ಯಕ್ತಪಡಿಸಿದ್ದರು.
ಹೌದು ಆನೇಕಲ್ ತಾಲೂಕಿನ ಬ್ಯಾಗಡದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೇಕಲ್ ಸುತ್ತಮುತ್ತ ಶೇಖರಣೆಯಾಗುವ ಕಸವನ್ನ ಇಲ್ಲಿನ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಲು ಆಗಿನ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಆ ಜಾಗವನ್ನು ಕಾಯ್ದಿರಿಸಿದ್ದರು. ಆದರೆ ಆ ಜಾಗದಲ್ಲಿ ಈಗ ಗೊಂದಲ ಗೂಡಾಗಿ ಪರಿಣಮಿಸಿದೆ ಕಾರಣ ಆ ಜಾಗದಲ್ಲಿ ರೆಡ್ಡಿ ಜನ ಸಂಘ ಸಮುದಾಯ ಭವನ ಕಟ್ಟಲು ಹಾಗೂ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲು ಕಿತ್ತಾಟ ಶುರುವಾಗಿದೆ.
ಆದರೆ ಈ ಜಾಗದಲ್ಲಿ ಅಂತಿಮವಾಗಿ ಕಟ್ಟಡ ಯಾವುದು ನಿರ್ಮಾಣವಾಗತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
PublicNext
23/08/2022 04:17 pm