ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈದ್ಗಾ ಮೈದಾನ ಸುತ್ತ ಖಾಕಿ ಸರ್ಪಗಾವಲು: ಕಿಡಿಗೇಡಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ಸುತ್ತ ಮುತ್ತ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸಂಘಟನೆಗಳು ಯಾವುದೇ ರೀತಿಯ ಪ್ರತಿಭಟನೆ ಗಲಾಟೆ ಮಾಡಿಕೊಳ್ಳದಂತೆ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ. ಇಂದು ಬೆಳ್ಳಿಗೆಯಿಂದ ಪರೇಡ್ ನಡೆಸಿರುವ ಚಾಮರಾಜಪೇಟೆ ಪೊಲೀಸರು ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ದಿನದಂದು ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಇದು ಕೆಲವರಿಗೆ ಇಷ್ಟು ದಿನ ಇಲ್ಲದ್ದು ಇದೀಗ ಏಕೆ ಈ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಅಸಮಾಧಾನವಿದೆ. ಈಗಾಗಲೇ ಹಿಂದೂಪರ ಸಂಘಟನೆಗಳು ಈದ್ಗಾ ಮೈದಾನದಲ್ಲಿ ಕೇವಲ ಸ್ವಾತಂತ್ರ್ಯ ದಿನಾಚರಣೆ ಅಲ್ಲ ಗಣೇಶೋತ್ಸವವನ್ನು ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಸ್ಥಳೀಯ ಶಾಸಕರಾದ ಜಮೀರ್ ಅಹ್ಮದ್ ಖಾನ್ ಅವರು ಅಪಸ್ವರ ಎತ್ತಿದ್ರು. ಇದೂ ಕೂಡ ಒಂದು ಮುಸುಕಿನ ಸಮರ ಆಗಿದೆ. ಜಮೀರ್ ಅವರ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಈದ್ಗಾ ಮೈದಾನದಲ್ಲಿ ಹಬ್ಬ ಆಚರಣೆ ಮಾಡುವುದಕ್ಕೆ ಮತ್ತು ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ಕೆಲವರಿಗೆ ಅಸಮಾಧಾನ ಇರೋದ್ರಿಂದ ಮೈದಾನದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.

ಈಗಾಗಲೇ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ಕೆಲವೆಡೆ ಪರೇಡ್ ಕೂಡ ನಡೆಸಲಾಗಿದೆ. ಸರಿ ಸುಮಾರು 600 ಕ್ಕೂ ಹೆಚ್ಚು ಪೊಲೀಸರು ಪಥ ಸಂಚಲನ ಮಾಡುತ್ತಿದ್ದು, ಚಾಮರಾಜ ಪೇಟೆ ಸುತ್ತ ಮುತ್ತ ಯಾರು ಸಹ ದುಷ್ಕೃತ್ಯ ಎಸಗುವ ಪ್ರಯತ್ನ ಮಾಡ್ಬೇಡಿ ಎಂದು ಖಡಕ್ ವಾರ್ನಿಂಗ್ ಕಿಡಿಗೇಡಿಗಳಿಗೆ ರವಾನೆ ಮಾಡಲಾಗಿದೆ.

ಭೈಟ್ : ಸಂದೀಪ್ ಪಾಟೀಲ್. ಹೆಚ್ಚುವರಿ ಆಯುಕ್ತರು

ಈದ್ಗಾ ಮೈದಾನದಲ್ಲಿ ಆಗಸ್ಟ್ 15 ರಂದು ವಿಶೇಷ ತರಬೇತಿಯುಳ್ಳ ಕಮಾಂಡೋ ಪಡೆ ಬರಲಿದ್ದು, ಸರಿ ಸುಮಾರು 500 ಕ್ಕೂ ಹೆಚ್ಚು ಪೊಲೀಸರಿಂದ ರೂಟ್ ಮಾರ್ಚ್ ಇರಲಿದೆ. ಈದ್ಗಾ ಮೈದಾನ ಸಂಪೂರ್ಣವಾಗಿ ಖಾಕಿ ಕಣ್ಗಾವಲಿನಲ್ಲಿದೆ. ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಹ್ವಾನ ಇದ್ದವರಿಗೆ ಮಾತ್ರ ಅವಕಾಶ ಇರೋದ್ರಿಂದ ಅನಗತ್ಯವಾಗಿ ಯಾರೂ ಕೂಡ ಗೊಂದಲ ಸೃಷ್ಟಿಸಬಾರದು ಎಂದು ತಿಳಿಸಿದ್ದಾರೆ.

ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್

Edited By : Somashekar
PublicNext

PublicNext

12/08/2022 06:19 pm

Cinque Terre

26.19 K

Cinque Terre

1

ಸಂಬಂಧಿತ ಸುದ್ದಿ