ಬೆಂಗಳೂರು: ಬಿಬಿಎಂಪಿ ಮುಖ್ಯ ಕಛೇರಿ ಆವರಣದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಧರಣಿನಡೆಸಲಾಗ್ತಿದೆ. ಮೀಸಲಾತಿ ರಚನೆಯಲ್ಲಿ ಸರ್ಕಾರ ತಾರತಮ್ಯ ಮಾಡಿದೆ ಅಂತ ಆಕ್ರೋಶ ಹೊರಹಾಕಲಾಗ್ತಿದೆ. ವಾಸ್ತವ ಅಂಕಿ ಅಂಶಗಳನ್ನ ಆಧರಿಸಿ ವಾರ್ಡ್‌ಗಳನ್ನ ರಚನೆ ಮಾಡಬೇಕಿತ್ತು. ಆದ್ರೆ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ವಾರ್ಡ್ ವಿಂಗಡಣೆ ಮಾಡಿಲ್ಲ. ಸರ್ಕಾರ ಬೇಕಾಬಿಟ್ಟಿಯಾಗಿ ಮೀಸಲಾತಿ ಪ್ರಕಟ ಮಾಡಿದೆ ಎಂದು ಅಸಾಮಾಧಾನ ಹೊರಹಾಕಿದ್ದಾರೆ.
ಅಷ್ಟೇ ಅಲ್ಲದೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ರಾಮ್ ದಾಸ್ ಅಠವಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ರಿಗೆ ಆಕ್ಷೇಪಣ ಪತ್ರ ಸಲ್ಲಿಕೆ ಮಾಡಿದ್ದಾರೆ.
PublicNext
10/08/2022 03:01 pm