ಬೆಂಗಳೂರು: ಚಾಮರಾಜಪೇಟೆ ಮೈದಾನದ ಫೈಟ್ ಮತ್ತೊಂದು ಹಂತಕ್ಕೆ ತಲುಪಿದೆ. ದಿನಕ್ಕೊಂದು ತಿರುವನ್ನು ಮೈದಾನ ಪಡೆದುಕೊಳ್ಳುತ್ತಿದೆ. ಮೈದಾನದ ಹೋರಾಟ ಆಯ್ತು, ಕಂದಾಯ ಇಲಾಖೆಯ ಸ್ವತ್ತಾಯ್ತು. ಈಗ ಮತ್ತೊಂದು ವಿಚಾರವಾಗಿ ಹಿಂದೂಪರ ಸಂಘಟನೆಗಳು ಸಮರ ಸಾರಲು ಮುಂದಾಗಿದೆ.
ಹೌದು. ಈಗ ಈದ್ಗಾ ಮೈದಾನದ ಗೋಡೆಯ ನೆಲಸಮಕ್ಕೆ ಸಂಘಟನೆಗಳ ಪಟ್ಟು ಹಿಡಿದಿದೆ. ಮೈದಾನ ಕಂದಾಯ ಇಲಾಖೆಯ ಸ್ವತ್ತೆಂದ್ರೆ ಗೋಡೆ ಯಾಕೆ ಬೇಕು ಎಂದು ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಹಿಂದೂ ಹಬ್ಬಗಳ ಆಚರಣೆಗೆ ಈದ್ಗಾ ಗೋಡೆ ಅಡ್ಡಿಯಾಗುತ್ತದೆ. ಬೇರೆಡೆಗೆ ಸ್ಥಳಾಂತರಕ್ಕೆ ಜಾಗ ಇರುವಾಗ ಈ ಮೈದಾನವೇಕೆ? ಸದ್ಯ ವಕ್ಫ್ ಬೋರ್ಡ್ ಕೂಡ ಈಗ ಹಾಗೇ ನಡೆದುಕೊಳ್ಳುತ್ತಿದೆ ಅಂತ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕ್ತಿದಾರೆ.
ಅನುಮತಿ ಸಿಕ್ಕಿ ಗಣೇಶೋತ್ಸವ ಮಾಡುವ ವೇಳೆ ಈ ಗೋಡೆ ಮೇಲೆ ಲೇಜರ್ ಲೈಟ್ ಬೀಳಲ್ವಾ? ಆಗ ಹುಬ್ಬಳ್ಳಿಯ ರೀತಿಯೇ ಇಲ್ಲೂ ಘಟನೆ ಆದ್ರೆ ಏನ್ ಮಾಡೋದು? ಮಸೀದಿ ಮೇಲೆ ಲೇಸರ್ ಲೈಟ್ ಹಾಕಿದ್ರು ಅಂತ ಆಗ ದೊಡ್ಡ ಬಂಬಡಿ ಹೊಡೆದುಕೊಂಡರು. ಬದಲಿಗೆ ಈಗ ಈದ್ಗಾ ಕೊಟ್ಟಿರುವುದರಿಂದ ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡಲಿ. ಈ ವಿಚಾರವಾಗಿ ಗಟ್ಟಿ ನಿಲುವು ತೆಗೆದುಕೊಳ್ಳೋಕೆ ಸರ್ಕಾರ ಯೋಗ್ಯತೆ ಇಲ್ವಾ? ಈ ವಾಲ್‌ನ ಹಿಡ್ಕೊಂಡು ಗೋಲಿಬಾರ್ ನಡೆಸಿ ಹಿಂದೂಗಳ ಹೆಣ ಉರುಳಿಸಬೇಡಿ. ಸ್ಥಳಾಂತರ ಮಾಡದೇ ಹೋದ್ರೆ ನೆಲಸಮ ಮಾಡಿ ಸಂಪೂರ್ಣವಾಗಿ ಮೈದಾನ ಬಿಟ್ಟು ಕೊಡಿ ಎಂದು ಜನರು ಅಸಮಾಧಾನ ಹೊರಹಾಕ್ತಿದಾರೆ.
ಇನ್ನೂ ಇಷ್ಟೆಲ್ಲದರ ಮದ್ಯೆ ಶಾಸಕ ಜಮೀರ್ ಅಹಮ್ಮದ್ ಮೈದಾನದಲ್ಲಿ ಹೇಗೆ ಸ್ವಾತಂತ್ರ್ಯ ದಿನಾಚರಣೆ ಮಾಡ್ಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. 75ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇನ್ಮುಂದೆ ಸ್ವಾತಂತ್ರ್ಯೋತ್ಸವ ಗಣರಾಜ್ಯೋತ್ಸವ ಇಲ್ಲಿ ನಡೆಯುತ್ತದೆ. ಎಷ್ಟು ಜನ ಬೇಕಾದ್ರೂ ಸೇರಲಿ ಜೊತೆಯಾಗಿ ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ ಎಂದು ಜಮೀರ್ ಹೇಳಿದ್ದಾರೆ.
PublicNext
08/08/2022 05:34 pm