ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಅನಂತ ಪ್ರತಿಷ್ಠಾನದ ವಿರುದ್ಧ ಪಾದಯಾತ್ರೆ: ಅಣಕು ಶವಯಾತ್ರೆಯ ಮೂಲಕ ಆಕ್ರೋಶ

ದೇವನಹಳ್ಳಿ: ದಿವಂಗತ ಅನಂತ್ ಕುಮಾರ್ ಬಿಜೆಪಿ ಪಕ್ಷದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದ ನಾಯಕ. ಇವರ ಮೂಲ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿ. ಜೀವಂತವಿದ್ದಾಗ, ಅಧಿಕಾರ & ಪ್ರಭಾವದಲ್ಲಿದ್ದಾಗ ಊರಿನತ್ತ ಹೆಜ್ಜೆ ಹಾಕದ ಅನಂತ್ ಕುಮಾರ್ ಮೇಲೆ ಗ್ರಾಮಸ್ಥರಿಗೆ ಅಷ್ಟಕ್ಕಷ್ಟೇ. ಆದರೆ ಈಗ ಅನಂತ ಕುಮಾರ್ ಪತ್ನಿ ತೇಜಸ್ವಿನಿ, ಅನಂತ ಪ್ರತಿಷ್ಠಾನಕ್ಕೆ ಜಾಗ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು‌. ಸರ್ಕಾರ ಸಹ ದೇವನಹಳ್ಳಿಯ ಹೆಗ್ಗನಹಳ್ಳಿಲಿ 3 ಎಕರೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿದೆ.

ಇದು ಈಗ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ನಮಗೆ ಸ್ಮಶಾನವಿಲ್ಲ, ಬಡವರಿಗೆ ಸರಿಯಾದ ಸೂರಿಲ್ಲ. ಅಂತದ್ದರಲ್ಲಿ ದಿವಂಗತ ಅನಂತಕುಮಾರ್ ರವರ ಹೆಸರಿನ ಟ್ರಸ್ಟ್ ಗೆ ಜಾಗ ನೀಡಬಾರದು. ಗ್ರಾಮದ ಬಡ ಬಗ್ಗರಿಗೆ ನೀಡಬೇಕು ಎನ್ನುತ್ತಿದೆ. ಇದಕ್ಕೆ ಸರ್ಕಾರ ಬಗ್ಗದ ಹಿನ್ನೆಲೆಯಲ್ಲಿ, ಮಂಜೂರು ಸ್ಥಳದಲ್ಲಿ ಗ್ರಾಮಸ್ಥರು‌ ಗುಡಿಸಲು ಹಾಕಿ ಹೋರಾಟ‌ ನಡೆಸುತ್ತಿದ್ದಾರೆ. ಜೊತೆಗೆ ಇಂದು ಹೆಗ್ಗನಹಳ್ಳಿ ಗ್ರಾಮದಿಂದ ಕುಂದಾಣ ಮಾರ್ಗವಾಗಿ ಬೆಂಗಳೂರು ಗ್ರಾಮಾಂತರ ಡಿ.ಸಿ.ಕಚೇರಿವರೆಗೂ ಪಾದಯಾತ್ರೆಯ ಹೋರಾಟ ನಡೆಸಿದ್ದಾರೆ. ಹಾಗೆಯೇ ಅಣಕು ಶವಯಾತ್ರೆಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಧಿಕ್ಕಾರ ಕೂಗಿ, ನಮ್ಮ ಜಮೀನು ನಮಗೆ ನೀಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ..

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.

Edited By : Somashekar
PublicNext

PublicNext

06/08/2022 07:20 pm

Cinque Terre

47.34 K

Cinque Terre

2

ಸಂಬಂಧಿತ ಸುದ್ದಿ