ಬೆಂಗಳೂರು: ಯಡಿಯೂರಪ್ಪ ಸರ್ಕಾರದಲ್ಲಿ ಬಿಡಿಎ 500 ಕೋಟಿಗೂ ಮೀರಿದ ಕಾಮಗಾರಿಯಲ್ಲಿ ಹಗರಣ ಮಾಡಿದೆ ಎಂದು ಆರೋಪಿಸಿ, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಲಾಗ್ತಿದೆ.
ನೇರ ಪಾತ್ರಧಾರಿ ಮಂತ್ರಿ ಎಸ್ .ಟಿ. ಸೋಮಶೇಖರ್ ಸೇರಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಗ, ಅಳಿಯ, ಸಂಬಂಧಿಗಳ ವಿರುದ್ಧ ಇದೀಗ ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲಾಗಿದೆ. ಎಸ್ ಟಿ ಸೋಮಶೇಖರ್ ರಂತಹ ಭ್ರಷ್ಟಾಚಾರಿ ಹಾಗೂ ಕಳಂಕಿತ ಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಲಾಗಿದ್ದು, ಕೂಡಲೇ ಕಳಂಕಿತ ಈ ಮಂತ್ರಿಯನ್ನು ತಕ್ಷಣದಿಂದಲೇ ಮಂತ್ರಿಮಂಡಲದಿಂದ ವಜಾಗೊಳಿಸಬೇಕೆಂದು ಮುಖ್ಯಮಂತ್ರಿಗಳಿಗೆ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಮುಖ್ಯಮಂತ್ರಿಗಳೇ ನಿಮಗೆ ತಾಕತ್ತಿದ್ದರೆ ಎಸ್ ಟಿ ಸೋಮಶೇಖರ್ ವಜಾ ಮಾಡಿ, ಬಿಡಿಎ ಲೂಟಿ ಮಾಡಿದ ಭ್ರಷ್ಟಮಂತ್ರಿ ಸೋಮಶೇಖರ್ ರಾಜೀನಾಮೆ ಮಾಡಬೇಕೆಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದಿಂದ ಧರಣಿ ನಡೆಸಲಾಗಿದೆ.
PublicNext
19/09/2022 02:35 pm