ಬೆಂಗಳೂರು: ಪೊಲೀಸರು ರಾತ್ರಿ-ಹಗಲು, ಬಿಸಿಲು-ಮಳೆ ಅಂತ ನೋಡದೆ ಮನೆ ಮಠ ಬಿಟ್ಟು ಕೆಲಸ ಮಾಡುತ್ತಾರೆ. ಸರ್ಕಾರ ಪೊಲೀಸ್ ಇಲಾಖೆಯನ್ನ ಅದೆಷ್ಟು ನಿಕೃಷ್ಟವಾಗಿ ನಡೆಸಿಕೊಂಡಿದೆ ಅಂದ್ರೆ ಅದನ್ನ ಹೇಳ ತೀರದ್ದು. ಔರಾದ್ಕರ್ ವರದಿ ಜಾರಿ ಮಾಡುವಲ್ಲಿ ಸರ್ಕಾರಗಳು ಅವರಿಗೆ ಮಾಡಿದ ವಂಚನೆ ಇನ್ನೂ ಪೊಲೀಸರು ಮರೆತಿಲ್ಲ. ಕ್ವಾಟರ್ಸ್ ನಲ್ಲೂ ತಾರತಮ್ಯ ಇನ್ನೂ ತಪ್ಪಿಲ್ಲ. ಈ ಮಧ್ಯೆ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ನಿಂದ ಹಿಡಿದು ಎಸಿಪಿವರೆಗೂ ಪೊಲೀಸರ ಧ್ವನಿಯನ್ನು ದಮನ ಮಾಡುವತ್ತಾ ಇಲಾಖೆ ಕುರುಡು ಹೆಜ್ಜೆ ಇರಿಸಿದೆ.
ಇಲಾಖೆಯಲ್ಲಿ ಸರ್ವಾಧಿಕಾರಿ ಧೋರಣೆ ತಂದು ಪೊಲೀಸರ ತಲೆ ಮೇಲೆ ಚಪ್ಪಡಿ ಕಲ್ಲು ಹಾಕುಲು ಇಲಾಖೆ ಮುಂದಾಗಿದೆ.
ಎಸ್.. ಇದೇ ಸೆಪ್ಟೆಂಬರ್ 07-09-2022ರಂದು ಗೃಹ ಇಲಖೆ ಅಧೀನ ಕಾರ್ಯದರ್ಶಿಗಳು KSP (DP) ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ KSP(DP) Ammendment Rules 2022 draft ರೂಲ್ಸ್ ಅನ್ನು ಕರ್ನಾಟಕ ರಾಜ್ಯ ಪತ್ರದಲ್ಲೀ ಪ್ರಕಟಿಸಿದೆ. ಇದಕ್ಕೆ ಕೇವಲ 15 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ.
ಇಷ್ಟಕ್ಕೂ ಈ ತಿದ್ದುಪಡಿ ಏನೂ ಅಂತ ನೋಡೋದಾದ್ರೆ. ಸಂಪೂರ್ಣಾಗಿ ಪೊಲೀಸ್ರ ಧನಿ ಅಡಗಿಸೋದು ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಹೊಸ ತಿದ್ದುಪಡಿಯ ಪ್ರಕಾರ ಇಮ್ಮುಂದೆ ಹಿರಿಯ ಅಧಿಕಾರಿಗಳು ಕಿರಿಯ ಪೊಲೀಸರ ಮೇಲೆ ರೂಲ್ 7 ಅಥವಾ ಇನ್ನಿತರ ಶಿಸ್ತುಕ್ರಮಕ್ಕೆ ಮುಂದಾದ್ರೆ ಅದನ್ನ ಯಾರೂ ಪ್ರಶ್ನೆ ಮಾಡುವಂತಿಲ್ಲ. ಈ ಹಿಂದೆ ಯಾವುದೇ ಶಿಸ್ತು ಕ್ರಮಗಳನ್ನ ಪ್ರಶ್ನಿಸಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಹಿರಿಯ ಅಧಿಕಾರಿಗಳ ಅಥವಾ ಕೋರ್ಟ್ ಮೊರೆಹೋಗಬಹುದಿತ್ತು. ಆದ್ರೆ ಹೊಸ ತಿದ್ದುಪಡಿಯಲ್ಲಿ ಅದಕ್ಕೆ ಕೊಕ್ಕೆ ಹಾಕಿದೆ.
ಆಪಾದಿತ ಅಧಿಕಾರಿ/ಸಿಬ್ಬಂದಿ ತಮ್ಮ ಇಂಕ್ರಿಮೆಂಟ್ ಮತ್ತು ಪ್ರಮೋಷನ್ ತಡೆ ಹಿಡಿದರೂ ಸಹ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ.
ಈ ನಿಯಮವು ನೈಸರ್ಗಿಕ ನ್ಯಾಯ ತತ್ವದ ನಿಯಮಗಳಿಗೆ ವಿರುದ್ಧವಾದ ಕ್ರೂರ ಮತ್ತು ಕಠಿಣ ಕ್ರಮವಾಗಿದ್ದು ವ್ಯಕ್ತಿಯ ಮೂಲಭೂತ ಹಕ್ಕನ್ನೆ ಕಸಿದುಕೊಂಡಂತಾಗುತ್ತದೆ. ಇದರಿಂದ ಅಧಿಕಾರಿಗಳು ಪೂರ್ವಗ್ರಹ ಪೀಡಿತರಾಗಿ ಯಾರದೋ ಮಾತನ್ನು ಕೇಳಿ, ಹಳೆಯ ದ್ವೇಷದಿಂದ ಅಥವಾ ಮನಸಿಗೆ ಬಂದ ಹಾಗೆ ದಂಡನೆಗಳನ್ನ ವಿಧಿಸುತ್ತಿದ್ದು, ಅಲ್ಲದೇ ಅಂತಹ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸಲು ಸಹ ಅವಕಾಶ ನೀಡದೇ ಇರುವುದು ಶೋಚನೀಯ ಸಂಗತಿಯಾಗಿದೆ.
ಶಿಸ್ತು ಪ್ರಾಧಿಕಾರಗಳು ಕೆಲವೊಮ್ಮೆ ತಮ್ಮ ಅಧಿಕಾರ ಚಲಾವಣೆ ಮಾಡುವಾಗ ತಮ್ಮ ವಿವೇಚನಾ ಬಳಸದೇ ಅನಿಯಂತ್ರಿತ ಮತ್ತು ನಿರಂಕುಶ ಆದೇಶಗಳನ್ನ ಮಾಡುತ್ತಿದ್ದು ಅಂತಹ ಆದೇಶದ ಮೇಲೆ ತೊಂದರೆಗೀಡಾದ ಅಧಿಕಾರಿ ಸಿಬ್ಬಂದಿ ಇಲಾಖಾ ಮೇಲಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ ತಮ್ಮ ಕುಂದು ಕೊರತೆ ಮತ್ತು ತಮ್ಮ ಪರವಾದ ವಾದವನ್ನು ಮಂಡಿಸಲು ಅವಕಾಶವಿತ್ತು. ದೊಸ ತಿದ್ದುಪಡಿಯಲ್ಲಿ ಈ ನಿಯಮ ನಿಲ್ಲದಿರುವುದು ಪೊಲೀಸರನ್ನ ಸಾಕಷ್ಟು ಆತಂಕಕ್ಕೆ ದೂಡಿದೆ.
ದುರಂತ ಅಂದ್ರೆ ಸರ್ಕಾರ ಯಾವುದೇ ಪತ್ರ ವ್ಯವಹಾರವನ್ನು ಕನ್ನಡದಲ್ಲೇ ಹೊರಡಿಸಬೇಕು ಅನ್ನೋ ನಿಯಮವಿದ್ದರೂ ಸರ್ಕಾರ ಮಾತ್ರ ಇಂಗ್ಲಿಷ್‌ನಲ್ಲಿ ಹೊಸ ನಿಯಮದ ಆದೇಶವನ್ನ ಹೊರಡಿಸಿದದೆ.
ಸದ್ಯ ಪೊಲೀಸರ ಪರಾಗಿರೋ ಗೃಹಮಂತ್ರಿಗಳು ಈ ತಿದ್ದುಪಡಿ ಕುರಿತು ಕುಲಂಕುಷವಾಗಿ ಪರಿಶೀಲಿಸಬೇಕು ಲಕ್ಷಾಂತರ ಪೊಲೀಸರಿಗೆ ಮಾರಕವಾಗಿರೋ ಈ ತಿದ್ದುಪಡಿಯನ್ನ ವಾಪಸ್ ಪಡೆಯಬೇಕು ಎನ್ನುವುದು ಪೊಲೀಸರ ಪರವಾಗಿ ಪಬ್ಲಿಕ್ ನೆಕ್ಸ್ಟ್ ಆಗ್ರಹಿಸುತ್ತಿದೆ.
ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
18/09/2022 10:47 pm