ಬೆಂಗಳೂರು: ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ವಿರುದ್ದ ನಮ್ಮ ಪ್ರತಿಭಟನೆ ಇದೆ. ಹಿಂದಿ ದಿವಸ್ ಗೆ ನಾವು ತೀವ್ರ ವಿರೋಧ ಮಾಡ್ತೀವಿ ಅಂತಾ ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದಾರೆ.
ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಅಮೃತ ಮಹೋತ್ಸವ ಆಚರಿಸಿದ್ದೇವೆ. ಒಂದು ರಾಷ್ಟ ಒಂದು ಭಾಷೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಭಾವನಾತ್ಮಕ ವಿಚಾರಗಳನ್ನ ಕೆದುಕುತ್ತಾ ಇದ್ದಾರೆ. ಎಲ್ಲಾ ರಾಜ್ಯದಲೂ ಹಿಂದಿ ಭಾಷೆಯಿಲ್ಲ. ಗುಜರಾತಿಗೆ ಹೋದ್ರೆ ಗುಜರಾತಿಯಿದೆ. ಒರಿಸ್ಸಾಗೆ ಹೋದರೆ ಒರಿಯಾ ಭಾಷೆಯಿದೆ. ಭಾಷೆಯ ಕತ್ತನ್ನು ಹಿಸುಕುವ ಕೆಲಸಕ್ಕೆ ನಮ್ಮ ವಿರೋಧ ಇದೆ ಎಂದಿದ್ದಾರೆ. ಇನ್ನು ಹಿಂದಿ ದಿವಸ್ ವಿರೋಧಿಸಿ ವಿಧಾನಸೌಧದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡ್ತಿದ್ದಾರೆ.
PublicNext
14/09/2022 01:26 pm