ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತೋ ಅಥವಾ ಇಲ್ಲವೋ!? ಆದ್ರೆ, ಕೋರ್ಟ್ ನಲ್ಲಿ ಮಾತ್ರ ವಿಚಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಸೂಚನೆ ಬಳಿಕ ಸಾಕಷ್ಟು ಸಿದ್ಧತೆಯನ್ನು ರಾಜ್ಯ ಸರ್ಕಾರ ಮಾಡಿದೆ. ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿತ್ತು. ಇದನ್ನು ವಿಪಕ್ಷ ಕಾಂಗ್ರೆಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದೆ. ಇದ್ರ ಮಹತ್ವದ ವಿಚಾರಣೆ ಇಂದು ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ನೇತೃತ್ವದ ಪೀಠದಲ್ಲಿ ನಡೆಯುತ್ತಿದೆ.
ಕೋರ್ಟ್ ನಲ್ಲಿ ವಾದ- ಪ್ರತಿ ವಾದ ವಿವರ ಕೆಳಗಿನಂತಿವೆ.
ರಿಟ್ ಅರ್ಜಿದಾರರ ಪರ ವಕೀಲ ಅಶೋಕ್ ಹಾರನಹಳ್ಳಿ ವಾದ
ಆಡಳಿತ ಪಕ್ಷದ ಕ್ಷೇತ್ರದಲ್ಲಿ ಹೆಚ್ಚಿನ ವಾರ್ಡ್ ಮಾಡಲಾಗಿದೆ. ಆದರೆ, ಪ್ರತಿಪಕ್ಷದ ಕ್ಷೇತ್ರದಲ್ಲಿ ಕಡಿಮೆ ವಾರ್ಡ್ ಗಳನ್ನ ಮಾಡಲಾಗಿದೆ.
ವಿಜಯ ನಗರ, ಗೋವಿಂದ ರಾಜ ನಗರ ,ಚಾಮರಾಜಪೇಟೆ,ಚಿಕ್ಕ ಪೇ ಟೆಯಲ್ಲಿ ವಾರ್ಡ್ ಏರಿಳಿತ ಮಾಡಿ ದೆ. ಶಾಂತಿ ನಗರದಲ್ಲಿ ವಾರ್ಡ್ ಸಂಖ್ಯೆ ಬದಲಾಗಿಲ್ಲ.
ಸರ್ಕಾರ ಪೂರ್ವಗ್ರಹ ಪೀಡಿತವಾಗಿ ಮರುವಿಂಗಡಣೆ ಮಾಡಿದೆ. ಅನಗತ್ಯ ವಾಗಿ ವಾರ್ಡ್ ಬೌಂಡರಿ ಬದಲಾವಣೆ ಮಾಡಲಾಗಿದೆ. ಕ್ಷೇತ್ರದ ಮರು ವಿಂಗಡಣೆ ಅವೈಜ್ಞಾನಿಕಾಗಿದೆ - ಯು ಆರ್ ಆನರ್ ( ಅಶೋಕ್ ಹಾರನಹಳ್ಳಿ ವಾದ ಮಂಡನೆ )
ಮೈ ಲಾರ್ಡ್, - 2011ರ ಜನಸಂಖ್ಯೆ ಅಂಕಿ- ಅಂಶಗಳ ಮೇಲೆ ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆ ಮಾಡಲಾಗಿದೆ. ಪುನರ್ ವಿಂಗಡಣೆಯಲ್ಲಿ ಯಾವುದೇ ಲೋಷದೋಷ ಆಗಿಲ್ಲ.
ರಿಟ್ ಅರ್ಜಿದಾರರು ಇತ್ತೀಚಿನ ಜನಸಂಖ್ಯೆ ಅಂಕಿಅಂಶ ಮೇಲೆ ವಾದ ಮಂಡಿಸಿದ್ದಾರೆ. ಕೆಲವು ವಿಧಾನಸಭಾ ಕ್ಷೇತ್ರದ ವಾರ್ಡ್ ಗಳು ಮತ್ತೊಂದು ವಾರ್ಡ್ ಗೆ ಸೇರಿದೆ ಅಷ್ಟೇ. 198 ವಾರ್ಡ್ 243 ವಾರ್ಡ್ ಹೆಚ್ಚಳವಾದ ಹಿನ್ನೆಲೆಯಲ್ಲಿ ವಾರ್ಡ್ ಗಳ ಬೌಂಡರಿ ಬದಲಾವಣೆ ಮಾತ್ರ ಆಗಿದೆ. ವಾರ್ಡ್ ಬದಲಾವಣೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ - ಮೈ ಲಾರ್ಡ್
ಜಡ್ಜ್ ಹೇಮಂತ್ ಚಂದನ್ ಗೌಡರ್ ಪ್ರತಿವಾದಿಗೆ ಪ್ರಶ್ನೆ
ಯಾವ ಆಧಾರದ ಮೇಲೆ ವಾರ್ಡ್ ಗಳ ಮರು ವಿಂಗಡಣೆ ಮಾಡಲಾಗಿದೆ ?
ಪ್ರತಿವಾದಿ ವಕೀಲ ಫಣೀಂದ್ರ ವಾದ ಮಂಡನೆ ಮುಂದುವರಿಸಿ
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ದಲ್ಲಿ 4 ಲಕ್ಷ ಜನಸಂಖ್ಯೆ ಇದೆ. ಜತೆಗೆ ಕ್ಷೇತ್ರದ ವಿಸ್ತೀರ್ಣ ಕೂಡಾ ಹೆಚ್ಚಾಗಿರೋದ್ರಿಂದ 13 ವಾರ್ಡ್ ಗಳನ್ನಾಗಿ ವಿಂಗಡಣೆ ಮಾಡಲಾಗಿದೆ.
ಇಲ್ಲಿ ವೋಟರ್ ಲಿಸ್ಟ್ ನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಜನಸಂಖ್ಯೆಗಿಂತ ಮತದಾರ ಸಂಖ್ಯೆ ವ್ಯತ್ಯಾಸ ಇರುತ್ತೆ. ಈ ವಿಷಯ ಎಲ್ಲರಿಗೂ ಗೊತ್ತಿರುವುದೇ - ಯು ಆರ್ ಆನರ್.
ಜಡ್ಜ್ ಹೇಮಂತ್ ಚಂದನ್ ಗೌಡರ್ ವಾದಿಗಳಿಗೆ ಉತ್ತರ
ಅರ್ಜಿ ವಿಚಾರಣೆಯನ್ನು ಮತ್ತಷ್ಟು ಕೂಲಂಕಷವಾಗಿ ಚರ್ಚಿಸಬೇಕಿದೆ. ಹೀಗಾಗಿ ವಿಚಾರಣೆ ಮುಂದೂಡಿದ್ದೇವೆ.
ಒಟ್ಟಿನಲ್ಲಿ ಇದು ವಿಪಕ್ಷ ಕಾಂಗ್ರೆಸ್ ಪರ ವಕೀಲರ ಹಾಗೂ ಚುನಾವಣಾ ಆಯೋಗ ರಾಜ್ಯ ಸರ್ಕಾರದ ಪರ ವಕೀಲರ ವಾದವನ್ನು ಕೋರ್ಟ್ ಆಲಿಸಿದ ಬಳಿಕ ವಿಚಾರಣೆ ಮುಂದೂಡಿದೆ. ಹೀಗಾಗಿ ಚುನಾವಣಾ ನಡೆಯುವ ಬಗ್ಗೆ ಇದ್ದ ಕುತೂಹಲ ಮತ್ತಷ್ಟು ಹೆಚ್ವಾಗಿದೆ.
- ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
17/08/2022 02:31 pm