ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಗ್ನಿಪಥ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; "ಯುವಕರ ದಾರಿ ತಪ್ಪಿಸುವ ಯೋಜನೆ"

ಬೆಂಗಳೂರು: "ಅಗ್ನಿಪಥ್" ಹಿಂಪಡೆಯುವಂತೆ ಆಗ್ರಹಿಸಿ ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಎನ್ ಎಸ್ ಯುಐ ಪ್ರತಿಭಟನೆ ನಡೆಸಿತು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಕೆಪಿಸಿಸಿ ಎಸ್.ಸಿ. ಘಟಕ ಉಪಾಧ್ಯಕ್ಷ ನಲ್ಲೂರಹಳ್ಳಿ ನಾಗೇಶ್ ಮಾತನಾಡಿ, "ಅಗ್ನಿಪಥ್" ಯುವಕರನ್ನು ದಾರಿ ತಪ್ಪಿಸುವ ಯೋಜನೆ. ಕೇಂದ್ರ ಸರ್ಕಾರದ ಯೋಜನೆಗಳೆಲ್ಲ ಅಸ್ಪಷ್ಟವಾಗಿದ್ದು, ಅವೈಜ್ಞಾನಿಕತೆಯಿಂದ ಕೂಡಿವೆ.

ಮೋದಿಯವರು ಅಧಿಕಾರಕ್ಕೆ ಬಂದಾಗ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದ್ರೆ, ನಿರುದ್ಯೋಗವನ್ನೇ ಸೃಷ್ಟಿಸುತ್ತಿದ್ದಾರೆ. ಪ್ರಧಾನಿಯವರು ಆರ್ ಎಸ್ ಎಸ್ ನ ಆಣತಿಯಂತೆ ಆಡಳಿತ ನಡೆಸುತ್ತಿದ್ದಾರೆ. ಅದಾನಿ, ಅಂಬಾನಿಯಂತವರಿಗೆ ದೇಶವನ್ನು ಒತ್ತೆ ಇಟ್ಟಿದ್ದೇ ಇವರ ಸಾಧನೆಯಾಗಿದೆ ಎಂದು ಹರಿಹಾಯ್ದರು.

ವರದಿ: ಬಲರಾಮ್ ವಿ.

Edited By : Somashekar
Kshetra Samachara

Kshetra Samachara

03/07/2022 08:32 pm

Cinque Terre

8.73 K

Cinque Terre

0

ಸಂಬಂಧಿತ ಸುದ್ದಿ