ಅವರ ಹೆಸರಲ್ಲಿ ಇದದ್ದು 7 ಎಕರೆ 8 ಗುಂಟೆ ಜಾಗ, ಆದರೆ ಸರ್ಕಾರಿ ಭೂಮಿ ಮತ್ತು ಖಾಸಗಿ ವ್ಯಕ್ತಿಯ ಜಮೀನು ಸೇರಿ 20 ಎಕರೆಗೆ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ. ತನ್ನ ಜಮೀನಿನಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿದವರ ವಿರುದ್ಧ ದೂರು ನೀಡಿದ್ರೆ, ಬಲಾಡ್ಯರ ಪರವಾಗಿ ನಿಂತ ಪೊಲೀಸರು ದೂರು ನೀಡಿದವನ ವಿರುದ್ಧವೇ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರ ಈ ಧೋರಣೆ ವಿರುದ್ಧ ಕನ್ನಡ ಪರ ಸಂಘಟನೆಗಳು ಠಾಣೆ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಗ್ರೀನ್ ವ್ಯಾಲಿ ರೆಸಾರ್ಟ್ ಸುತ್ತುಮತ್ತಲಿನ ಜಮೀನಿಗೆ ಸಾಕಷ್ಟು ಬೇಡಿಕೆ ಇದೆ. ಇದರ ಪಕ್ಕದಲ್ಲಿನ ಚೊಕ್ಕನಹಳ್ಳಿ ಸರ್ವೆ ನಂಬರ್ 34, 35, 36 ರಲ್ಲಿ ನಸೀಮಾ ಬಾನು ಎಂಬುವರಿಗೆ ಸೇರಿದ 7 ಎಕರೆ 8 ಗುಂಟೆ ಜಮೀನು ಇದ್ದು. ಇದಕ್ಕೆ ಅಂಟುಕೊಂಡತೆ ರಾಮಚಂದ್ರಪ್ಪರವರಿಗೆ ಸೇರಿದ 3 ಎಕರೆ ಜಮೀನು ಇದೆ. ನಸೀಮಾ ಬಾನು ತಮಗೆ ಸೇರಿದ ಜಾಗಕ್ಕೆ ಮಾತ್ರ ಕಾಂಪೌಂಡ್ ಹಾಕುವ ಬದಲಿಗೆ ರಾಮಚಂದ್ರ ಸೇರಿದ 3 ಎಕರೆ ಮತ್ತು ಸರ್ಕಾರಿ ಜಾಗ ಸೇರಿದಂತೆ ಒಟ್ಟು 20 ಎಕರೆ ಜಾಗಕ್ಕೆ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ.
ತಮ್ಮ ಜಾಗ ಒತ್ತುವರಿಯಾಗಿರುವ ಬಗ್ಗೆ ರಾಮಚಂದ್ರಪ್ಪ ಹೊಸಹಳ್ಳಿ ಪೊಲೀಸ್ ಠಾಣೆ ಯಲ್ಲಿ ದೂರು ನೀಡಿದ್ದಾರೆ. ದೂರು ನೀಡಿದ್ದರು ಕಾಂಪೌಂಡ್ ನಿರ್ಮಾಣ ಮುಂದುವರೆದಿದೆ. ಕಳೆದ ಗುರುವಾರ ರಾತ್ರಿ ಯಾರೋ ಕಿಡಿಗೇಡಿಗಳು 500 ಮೀಟರ್ ಕಾಂಪೌಂಡ್ ನೆಲಕ್ಕುರುಳಿಸಿದ್ದಾರೆ. ನಸೀಮಾ ಬಾನು ತಮ್ಮ ಕಾವಲುಗಾರನ ಮೂಲಕ ರಾಮಚಂದ್ರಪ್ಪ ವಿರುದ್ಧ ದೂರು ನೀಡಿದ್ದಾರೆ. ಯಾವುದೇ ವಿಚಾರಣೆ ನಡೆಸಿದ ಪೊಲೀಸರು ಪ್ರಭಾವಿಗಳಿಗೆ ಮಣಿದು ರಾಮಚಂದ್ರಪ್ಪ ಮತ್ತು ಅವರ ಮಗ ಭಾಸ್ಕರ್ ನನ್ನ ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.
ರಾಮಚಂದ್ರಪ್ಪ ತಮ್ಮ ಜಮೀನು ಒತ್ತುವರಿ ಮಾಡಿರುವ ಬಗ್ಗೆ ಎರಡು ಬಾರಿ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ಪ್ರಕರಣ ದಾಖಲು ಮಾಡದ ಪೊಲೀಸರು. ನಸೀಮಾ ಬಾನು ಪ್ರಭಾವಿಗಳೆಂಬ ಕಾರಣಕ್ಕೆ ಅವರು ದೂರು ನೀಡಿದ ತಕ್ಷಣವೇ ಹೊಸಹಳ್ಳಿ ಪೊಲೀಸರು ರಾಮಚಂದ್ರಪ್ಪ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರ ಧೋರಣೆ ಖಂಡಿಸಿ ಕನ್ನಡಪರ ಸಂಘಟನೆಗಳು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಬಲ್ಯಾಢರ ಹಣ ಬಲ ಮತ್ತು ಪೊಲೀಸ್ ಅಧಿಕಾರಿಗಳ ಧೋರಣೆಯಿಂದ ಸಣ್ಣ ಹಿಡುವಳಿದಾರನಿಗೆ ರಕ್ಷಣೆ ಇಲ್ಲದಂತಾಗಿದೆ. ಅಶಕ್ತರಿಗೆ ರಕ್ಷಣೆ ನೀಡ ಬೇಕಾದ ಪೊಲೀಸರು ಬಲಾಡ್ಯರ ಪರವಾಗಿರೋದು ವ್ಯವಸ್ಥೆಯನ್ನ ಅಣಕ ಮಾಡುವಂತಿದೆ. ಪೊಲೀಸ್ ಅಧಿಕಾರಿಗಳು ವಿರುದ್ಧ ಉಗ್ರ ಹೋರಾಟ ಎಚ್ಚರಿಕೆಯನ್ನ ಕನ್ನಡ ಪರ ಸಂಘಟನೆಗಳು ನೀಡಿದ್ದಾರೆ.
Kshetra Samachara
04/06/2022 06:02 pm