ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಂಗಳೂರಿನ ಕ್ಲಾರೆನ್ಸ್ ಹೈಸ್ಕೂಲ್ ನಲ್ಲಿ ಬೈಬಲ್ ಶಿಕ್ಷಣ ಕಡ್ಡಾಯ ಆರೋಪ - ಕಾನೂನು ಹೋರಾಟಕ್ಕೆ ಮುಂದಾದ ಸಂಸ್ಥೆ

ಬೆಂಗಳೂರು: ಇಲ್ಲಿನ ಕ್ಲಾರೆನ್ಸ್ ಹೈಸ್ಕೂಲಿನಲ್ಲಿ ಬೈಬಲ್ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹಿಂದೂಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.

ರಿಚರ್ಡ್ಸ್ ಟೌನ್ ನಲ್ಲಿರುವ ಈ ಶಾಲೆಗೆ ಪ್ರವೇಶಾತಿ ಪಡೆಯುವ ಪ್ರತಿ ವಿದ್ಯಾರ್ಥಿಗಳಿಗೂ ಬೈಬಲ್ ಓದುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಲಾಗಿದೆ. ಇದು ಸಂವಿಧಾನದ ಪರಿಚ್ಛೇದ 25ರ ಉಲ್ಲಂಘನೆ ಎಂದು ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆ ಪ್ರಿನ್ಸಿಪಲ್ ಜೆರ್ರಿ ಜಾರ್ಜ್ 100 ವರ್ಷಗಳಿಂದ ಬೈಬಲ್ ಬೋಧನೆ ನೆ ಆಗ್ತಿದೆ. ಎಲ್ಲದಕ್ಕೂ ನಮ್ಮ ಲಾಯರ್ ಉತ್ತರ ನೀಡ್ತಾರೆ. ಹೈಸ್ಕೂಲ್ ಆಡಳಿತ ಮಂಡಳಿ ಯಿಂದ ಪ್ರೆಸ್ ರಿಲೀಸ್ ಮಾಡುತ್ತೆವೆ. ಬೈಬಲ್ ಕಡ್ಡಾಯ ಭೋದನೆ ವಿಚಾರದ ಬಗ್ಗೆ ಸ್ಪಷ್ಟನೆ ನೀಡದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

Edited By :
Kshetra Samachara

Kshetra Samachara

25/04/2022 03:31 pm

Cinque Terre

4.47 K

Cinque Terre

1

ಸಂಬಂಧಿತ ಸುದ್ದಿ