ಬೆಂಗಳೂರು: ಅವರೆಲ್ಲ ಇಂಜಿನಿಯರ್ ಆಗಬೇಕು, ಫಾರ್ಮಸಿ , ವೆಟರ್ನರಿ, ಡಾಕ್ಟರ್ ಆಗಬೇಕು ಅಂತ ಕನಸು ಕಂಡವರು. ಆದ್ರೆ, ಅವರ ಕನಸನ್ನೆಲ್ಲಾ KEA ಬೋರ್ಡ್ ನುಚ್ಚುನೂರು ಮಾಡಿದೆ . KEA ಎಡವಟ್ಟಿನಿಂದ ರಿಪೀಟರ್ಸ್ ವಿದ್ಯಾರ್ಥಿಗಳ ಬದುಕು ಆತಂತ್ರವಾಗಿದೆ. ಹೀಗಾಗಿ ಇವತ್ತು KEA ಆವರಣ ಹೊತ್ತಿ ಉರಿಯಿತು.
V.O- ಧಿಕ್ಕಾರ ಧಿಕ್ಕಾರ ಸಚಿವ ಅಶ್ವಥ್ ನಾರಾಯಣ್ ಗೆ ಧಿಕ್ಕಾರ... KEA ಬೋರ್ಡ್ ಡೌನ್ ಡೌನ್....ಮಾನಗೆಟ್ಟ ಹೇಡಿ ಸರ್ಕಾರಕ್ಕೆ ಧಿಕ್ಕಾರ..ಧಿಕ್ಕಾರ.. ಈ ಆಕ್ರೋಶದ ಘೋಷಣೆ ಕೇಳಿಬಂದಿದ್ದು ಮಲ್ಲೇಶ್ವರಂನ ಕೆಇಎ ಬೋರ್ಡ್ ಎದುರು. ಇವರೆಲ್ಲಾ 2020-21ನೇ ಸಾಲಿನ ಕೋವಿಡ್ ಬ್ಯಾಚ್ ನ ಪಾಸ್ಡ್ಔಟ್ ವಿದ್ಯಾರ್ಥಿಗಳು ಇವರು ಪ್ರೊಟೆಸ್ಟ್ ಮಾಡ್ತಿರೋದು KEA ಬೋರ್ಡ್ ವಿರುದ್ಧ.
ವೃತ್ತಿಪರ ಕೋರ್ಸ್ ಗಳ ಸಿಇಟಿ ಪರೀಕ್ಷೆ ಫಲಿತಾಂಶ ಶನಿವಾರ ಹೊರಬಿತ್ತು. ರಿಸಲ್ಟ್ ನಂತ್ರ ಇದೀಗ ಹೊಸದೊಂದು ವಿವಾದ ಭುಗಿಲೆದ್ದಿದ್ದು, ಕೋವಿಡ್ ಬ್ಯಾಚ್ ನಲ್ಲಿ ತಮ್ಮ SSLC, 1st PUC ಗ್ರೇಸ್ ಮಾರ್ಕ್ಸ್ ನಿಂದ ಪಾಸ್ ಆಗಿ ಆ ಅಂಕಗಳು ತೃಪ್ತಿಇಲ್ಲದೆ ಈ ವರ್ಷ ಎಕ್ಸಾಂ ಬರೆದು CET ರಿಸಲ್ಟ್ ನಿಂದ ಅನ್ಯಾಯಕ್ಕೊಳಗಾದವರು ಇವರೆಲ್ಲಾ.
23 ಸಾವಿರಕ್ಕೂ ಹೆಚ್ಚಿನ ರಿಪೀಟರ್ಸ್ ಈ ವರ್ಷ CET ಹಾಗೂ PUC ಎಕ್ಸಾಂ ಬರೆದಿದ್ರು. ಇವರ CET ರಿಸಲ್ಟ್ ನಲ್ಲಿ ಈ ವರ್ಷದ PUC ಅಂಕ ಪರಿಗಣಿಸದೆ ಕಳೆದ ವರ್ಷದ ಕೋವಿಡ್ ಇಯರ್ ನ ಅಂಕ ಪರಿಗಣಿಸಿ ಫಲಿತಾಂಶ ಕೊಡಲಾಗಿದೆ. ಇದ್ರಿಂದ ಇವರೆಲ್ಲರ ರ್ಯಾಂಕಿಂಗ್ 1 ಲಕ್ಷದ ಮೇಲೆ ಬಂದಿದೆ. ಆದ್ರೆ, CBSE ವಿದ್ಯಾರ್ಥಿಗಳಿಗೆ ಮಾತ್ರ ಈ ವರ್ಷದ PUS ರಿಸಲ್ಟ್ ಪರಿಗಣಿಸಿ CET ರಿಸಲ್ಟ್ ಕೊಟ್ಟಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ರು.
V.O- ಇನ್ನು, ಆಕ್ರೋಶದ ಕಾವು ಹೆಚ್ಚಾಗ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ KEA ಬೋರ್ಡ್ ನಿರ್ದೇಶಕಿ ರಮ್ಯಾ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಮನವೊಲಿಸಲು ಪ್ರಯತ್ನಿಸಿದ್ರು. ಆದ್ರೆ, ಅದು ಪ್ರಯೋಜನವಾಗ್ಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಮ್ಯಾ ನಿಯಮದ ಪ್ರಕಾರ ಪಿಯುಸಿ ರಿಪೀಟರ್ಸ್ ಅಂಕವನ್ನ ರ್ಯಾಂಕ್ ನೀಡುವ ವೇಳೆ ಪರಿಗಣನೆ ಮಾಡಿಲ್ಲ. ಆದ್ರೆ, ವಿದ್ಯಾರ್ಥಿ ಹಾಗೂ ಪೋಷಕರು ಪರಿಗಣನೆಗೆ ಒತ್ತಾಯ ಮಾಡ್ತಿದ್ದಾರೆ.
ಈ ಬಗ್ಗೆ ಸಾಕಷ್ಟು ಅರ್ಜಿಗಳು ಈಗಾಗಲೇ ಬಂದಿವೆ. ಉನ್ನತ ಶಿಕ್ಷಣ ಸಚಿವರು ಸಹ ಪರಿಗಣನೆಗೆ ಸೂಚನೆ ಕೊಟ್ಟಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡ್ತೀವಿ. ICSC, CBSC ರಿಪೀಟರ್ಸ್ ಅಂಕವನ್ನು ಸಹ ಪರಿಗಣನೆ ಮಾಡಲ್ಲ. ಈ ಕುರಿತು ವೆಬ್ ಸೈಟ್ ನಲ್ಲಿ ಅಪ್ಡೇಟ್ ಆಗಲಿದೆ. ನಿಯಮದ ಪ್ರಕಾರ ಈಗ ಬಂದಿರೋ ಅರ್ಜಿ ಸ್ವೀಕರಿಸಲು ಸಾಧ್ಯವಿಲ್ಲ. ಬೇಕಾದ್ರೆ ಕೋರ್ಟ್ ಗೆ ಹೋಗಿ ಹೋರಾಟ ಮಾಡಿ ಎಂಬ ಹಾರಿಕೆಯ ಉತ್ತರ ಕೊಟ್ರು.
V.O- ಪ್ರತಿಭಟನಾಕಾರರ ಆಕ್ರೋಶ ಹೆಚ್ಚಾಗ್ತಿದ್ದಂತೆ ಎಚ್ಚೆತ್ತ ಪೊಲೀಸರು, ಬೋರ್ಡ್ ಎದುರು ಪ್ರತಿಭಟನೆಗೆ ಅವಕಾಶ ಇಲ್ಲ. ನೀವು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಿ ಎಂದು ಅವರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು. ಆಗಸ್ಟ್ 5ರಿಂದ ಆರಂಭವಾಗಬೇಕಿದ್ದ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆಯನ್ನು 2 ದಿನ ಮುಂದೂಡಲಾಗಿದೆ. ಪೋಷಕರು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದು, ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಂದೆ ಯಾವ ಸ್ವರೂಪ ಪಡೆಯುತ್ತೆ ಎಂಬುದನ್ನ ಕಾದು ನೋಡಬೇಕಿದೆ.
- ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
01/08/2022 08:55 pm