ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭೂಮಾಫಿಯಾಕ್ಕೆ ಮನೆ ಕಳೆದುಕೊಂಡ ವೃದ್ಧ ದಂಪತಿ, ನ್ಯಾಯ ಕೇಳಿದ್ರೆ ಕ್ರಿಮಿನಲ್ ಕೇಸ್ ಹುಷಾರ್..!

ರಾಜ್ಯ ರಾಜಧಾನಿಯಲ್ಲಿ ಭೂ ಮಾಫಿಯವನ್ನ ತಡೆಯಲು ಅದೆಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗುತ್ತಿಲ್ಲ. ಅದಕ್ಕೆ ಸ್ಪಷ್ಟ ಉದಾಹರಣೆ ಇವತ್ತಿನ ಈ ಸ್ಟೋರಿಯಲ್ಲಿದೆ ನೋಡಿ.

ಇಲ್ಲಿರುವ ಈ ವೃದ್ಧ ದಂಪತಿಗಳನ್ನ ಒಮ್ಮೆ ನೋಡಿ. ಇವರ ಹೆಸರು ಕೃಷ್ಣಪ್ಪ ಮತ್ತು ಶಂಕ್ರಮ್ಮ. ಈ ವೃದ್ಧ ದಂಪತಿ ಹಲವು ದಶಕಗಳಿಂದ ಬೊಮ್ಮನಹಳ್ಳಿಯ ತಮ್ಮ ಸ್ವಂತ ಮನೆಯಲ್ಲೇ ನೆಲೆಸಿದ್ದರು. ಇವರು ತಮ್ಮ ಮಗ ಮತ್ತು ಅವನ ಕುಟುಂಬದೊಂದಿಗೆ ಸಂತೋಷದಿಂದ ವಾಸಿಸುತ್ತಿದ್ದರು. ಆದರೆ ಯಾವಗ ಭೂ ಮಾಫಿಯಾದಲ್ಲಿ ಶಾಮೀಲು ಆದವರು ಇವರ ಜೀವನದಲ್ಲಿ ಪ್ರವೇಶಿಸಿದಾಗ ಎಲ್ಲವೂ ಬದಲಾಯಿತು.

ಕೃಷ್ಣಪ್ಪ ಮತ್ತು ಶಂಕ್ರಮ್ಮ ದಂಪತಿಯ ಸುಂದರ ಸಂಸಾರ ಇದೇ ಶನಿವಾರ ಭೂಮಾಫಿಯಾಕ್ಕೆ ಬಲಿಯಾಗಿದೆ. ಶನಿವಾರ ಬೆಳಗ್ಗೆ ಅವರ ಮಗ ಕೆಲಸದ ಮೇಲೆ ಹೊರಗೆ ಹೋಗಿದ್ದ. ಪೊಲೀಸರು ಮನೆಯ ಬಳಿ ಬಂದು ವೃದ್ಧ ದಂಪತಿಯನ್ನು ಠಾಣೆಗೆ ಕರೆಸಿ 4ರಿಂದ 5 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಕಾಯುವಂತೆ ಮಾಡಿದ್ದಾರಂತೆ. ಈ ವೇಳೆ ಕೆಲ ಗೂಂಡಾಗಳು ಇವರ ಮನೆಗೆ ನುಗ್ಗಿ ಮನೆ ಧ್ವಂಸಗೊಳಿಸಿದ್ದಾರೆ. ಇಷ್ಟು ಸಾಲದೆಂಬಂತೆ ಬೊಮ್ಮನಹಳ್ಳಿ ಪೊಲೀಸರು ಕೃಷ್ಣಪ್ಪ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಕೂಡ ಹಾಕಿದ್ದಾರೆ ಎನ್ನಲಾಗಿದೆ. ನ್ಯಾಯ ಕೇಳಲು ಹೋದ ಕೃಷ್ಣಪ್ಪ ಮಗನ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರಂತೆ.

ಕೃಷ್ಣಪ್ಪ ಮತ್ತು ಅವರ ಕುಟುಂಬ ಹೈಕೋರ್ಟ್‌ಗೆ ಹೋಗಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.ಈ ನಡುವೆ ಚಂದ್ರಶೇಖರ್ ರೆಡ್ಡಿ, ಜನಾರ್ದನ್ ರೆಡ್ಡಿ, ದಿಲೀಪ್ ರೆಡ್ಡಿ, ರಂಜಿತ್ ರೆಡ್ಡಿ ಪೊಲೀಸರನ್ನು ಬಳಸಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಂಕ್ರಮ್ಮ ದೂರುತ್ತಿದ್ದಾರೆ.

ಅದೇನೇ ಇರಲಿ, ರಕ್ಷಣೆ ನೀಡಬೇಕಾದ ಪೊಲೀಸ್ರೇ ಈ ರೀತಿ ಮಾಡಿದರೆ ಜನರು ಯಾರಲ್ಲಿ ರಕ್ಷಣೆ ಕೇಳಬೇಕು? ಕುತಂತ್ರದ ಕೂಪಕ್ಕೆ ಬಲಿಯಾದ ಈ ವೃದ್ಧ ದಂಪತಿಗೆ ನ್ಯಾಯ ಸಿಗಲಿ ಅನ್ನುವುದೇ ನಮ್ಮ ಆಶಯ.

Edited By :
PublicNext

PublicNext

23/03/2022 11:11 am

Cinque Terre

29.29 K

Cinque Terre

2

ಸಂಬಂಧಿತ ಸುದ್ದಿ