ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಾಡೋನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಾವಿರ ಸಮಸ್ಯೆಗಳು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಪಂಚಾಯಿತಿಗೆ ಕಾಲಿಟ್ಟರೆ ಸಾವಿರ ಸಮಸ್ಯೆಗಳು ಕಣ್ಣಿಗೆ ಬೀಳುತ್ತವೆ. ಸಮಸ್ಯೆ ಪರಿಹಾರಕ್ಕಾಗಿ ಸಾಕಷ್ಟು ಅರ್ಜಿ ಸಲ್ಲಿಸಲಾಗಿದೆ. ಆದರೆ ಪಂಚಾಯಿತಿಯಿಂದ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸವಾಗಿಲ್ಲ. ಇದರಿಂದ ಬೇಸತ್ತ ಜನರು ತಾವೇ ಚರಂಡಿ ನಿರ್ಮಾಣ ಮಾಡಿ ಮಳೆ ನೀರಿನಿಂದ ಮುಕ್ತಿ ಪಡೆದಿದ್ದಾರೆ.

ಪಂಚಾಯತ್ ಸದಸ್ಯ ಆನಂದ್ ಕುಮಾರ್ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದಾರೆ. ಚರಂಡಿ, ಒತ್ತುವರಿ, ಬಿಲ್ ಪಾವತಿ, ಮನೆ ಮಂಜೂರಾತಿ, ಪಂಚಾಯಿತಿಯಲ್ಲಿನ ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅರ್ಜಿಗಳನ್ನ ಬರೆದಿದ್ದಾರೆ. ಪಂಚಾಯಿತಿ ಪಿಡಿಓ ಅವರಿಂದ ಹಿಡಿದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿವರೆಗೂ ಅರ್ಜಿ ಕೊಟ್ಟಿದ್ದಾರೆ. ಆದರೆ ಯಾವ ಅರ್ಜಿಗೂ ಇಲ್ಲಿಯವರೆಗೂ ಸ್ಪಂದನೆ ಸಿಕ್ಕಿಲ್ಲ.

ಹಾಡೋನಹಳ್ಳಿ ಗ್ರಾಮದ ಘಾಟಿ ರಸ್ತೆಯಿಂದ ಕದಿರಿ ನರಸಿಂಹಯ್ಯ ಮನೆವರೆಗೂ ಚರಂಡಿ ನಿರ್ಮಾಣ ಮಾಡಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಮಳೆ ಬಂದಾಗ ನೇರವಾಗಿ ಎಸ್‌ಸಿ ಕಾಲೋನಿಗೆ ಮಳೆ ನೀರು ನುಗ್ಗುತ್ತೆ, ಅರ್ಧಕ್ಕೆ ನಿಂತಿರುವ ಚರಂಡಿಯನ್ನು ಪೂರ್ಣಗೊಳಿಸುವಂತೆ ಇದೇ ಆನಂದ್ ಕುಮಾರ್ ಗ್ರಾಮ ಪಂಚಾಯಿತಿಗೆ ಅರ್ಜಿ ಬರೆದಿದ್ದಾರೆ. ಪಂಚಾಯಿತಿಯಿಂದ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸವೇ ಆಗಿಲ್ಲ.

ಹಾಡೋನಹಳ್ಳಿ ಗ್ರಾಮ ಪಂಚಾಯತ್ ಅಧಿಕಾರಿಗಳ ಉದಾಸೀನತೆಯಿಂದ ಬೇಸತ್ತು ಜನರು ತಾವೇ ಚರಂಡಿ ನಿರ್ಮಾಣ ಮಾಡಿ ಮಳೆ ನೀರಿನಿಂದ ಮುಕ್ತಿ ಪಡೆದಿದ್ದಾರೆ.

Edited By : Nagesh Gaonkar
PublicNext

PublicNext

07/09/2022 07:28 pm

Cinque Terre

25.94 K

Cinque Terre

0

ಸಂಬಂಧಿತ ಸುದ್ದಿ