ಬೆಂಗಳೂರು:ಡೀಸೆಲ್, ವಾಹನದ ಬಿಡಿ ಭಾಗಗಳು, ಸರ್ವಿಸ್ ಚಾರ್ಜ್ ಎಲ್ಲವೂಗಳ ರೇಟ್ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ
ಈಗ ಖಾಸಗಿ ಶಾಲೆಗಳು ತಮ್ಮ ವಾಹನ ಶುಲ್ಕವನ್ನ ಹೆಚ್ಚಿಸಲು ಮುಂದಾಗಿದ್ದು, 15 ರಿಂದ 20 ರಷ್ಟು ವಾಹನ ಶುಲ್ಕ ಹೆಚ್ಚಳ ಮಾಡಲು ಖಾಸಗಿ ಶಾಲೆಗಳು ನಿರ್ಧಾರ ಮಾಡಿವೆ.
ಖಾಸಗಿ ಶಾಲೆಗಳ ಈ ಒಂದು ನಿರ್ಧಾರ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಖಾಸಗಿ ಶಾಲೆಗಳ ಈ ನಿರ್ಧಾರಕ್ಕೆ ಪೋಷಕರು ವಿರೋಧವನ್ನು ವ್ಯಕ್ತಪಡಿಸಿತ್ತಿದ್ದಾರೆ. ಖಾಸಗಿ ಶಾಲೆಯಗಳು ಈಗಾಗಲೇ ಶುಲ್ಕ ಜಾಸ್ತಿ ಮಾಡಿವೆ. ಈಗ ವಾಹನ ಶುಲ್ಕ ಹೆಚ್ಚಳ ಮಾಡಿದ್ದಾರೆ. ದರ ಜಾಸ್ತಿ ಮಾಡುವ ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗ್ಬೇಕು ಎಂದು ಪೋಷಕರು ಒತ್ತಾಯ ಮಾಡುತ್ತಿದ್ದಾರೆ .
PublicNext
11/07/2022 12:21 pm