ಬೆಂಗಳೂರು: ಬೈಕ್ ಏರಿದ ಎಪ್ಪತ್ತರ ವಯೋಮಾನದ ಸಚಿವ ಎಂಟಿಬಿ ನಾಗರಾಜ್, ಯುವಕರು ನಾಚುವಂತೆ ಹೊಸಕೋಟೆ ನಗರದ ವಿವಿಧ ವಾರ್ಡುಗಳಲ್ಲಿ ಸುತ್ತಾಡಿ ಜನರ ಕುಂದು ಕೊರತೆ ಆಲಿಸಿದರು.
ಈಗಾಗಲೇ ರಾಜ್ಯದಾದ್ಯಂತ ಮಳೆ ಜೋರಾಗಿದೆ. ಬೆಂಗಳೂರು, ಹೊಸಕೋಟೆ ನಗರದಲ್ಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ನಗರದ ವಾರ್ಡ್‌ಗಳಲ್ಲಿನ ರಾಜಕಾಲುವೆ ಸ್ವಚ್ಛವಾಗಬೇಕಿದೆ. ಆದ್ದರಿಂದ ರಾಜಕಾಲುವೆ ಒತ್ತುವರಿದಾರರು ಜಾಗ ಖಾಲಿ ಮಾಡಬೇಕು ಎಂದು ಎಚ್ಚರಿಸಿದರು. ಹೊಸಕೋಟೆ ನಗರವನ್ನು ಸ್ಮಾರ್ಟ್ ಸಿಟಿ ಮಾಡುವ ವಿಚಾರದ ಕ್ರಿಯಾ ಯೋಜನೆ ಸಹ ಪ್ರಗತಿಯ ಹಾದಿಯಲ್ಲಿದೆ. ಇನ್ನು ಕಾಡುಗೋಡಿಯಿಂದ ಮೆಟ್ರೋ ರೈಲು ಹಾಗು ಹಾಗೂ ಕಾವೇರಿ ಐದನೇ ಹಂತಕ್ಕಾಗಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ ಎಂದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್.. ಹೊಸಕೋಟೆ
Kshetra Samachara
09/07/2022 06:35 pm