ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೌರ ಕಾರ್ಮಿಕರ ಪ್ರತಿಭಟನೆ, ಸ್ವಚ್ಚತೆ ಸಮಸ್ಯೆ : ಪಾಲಿಕೆ ವಿಶೇಷ ಆಯುಕ್ತ ಡಾ ಹರೀಶ್ ಕುಮಾರ್

ಬೆಂಗಳೂರು: ಕಳೆದ ಕೆಲ ದಿನಗಳಿಂದ ಪೌರ ಕಾರ್ಮಿಕರ ಪ್ರತಿಭಟನೆಯ ನಡೆಯುತ್ತಿದೆ. ಪ್ರತಿಭಟನೆಯಿಂದ ನಗರದಲ್ಲಿ ರಸ್ತೆ ಸ್ವಚ್ಚತೆ ಸಮಸ್ಯೆ ಎದುರಾಗಿದೆ ಎಂದು ಪಾಲಿಕೆ ಘನತ್ಯಾಜ್ಯ ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಡಾ ಹರೀಶ್ ಕುಮಾರ್ ಒಪ್ಪಿಕೊಂಡರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರೀಶ್ ಕುಮಾರ್ ಸದ್ಯ ಕಸದ ಸಮಸ್ಯೆ ಬಗೆಹರಿಸಲು ಸ್ವೀಪಿಂಗ್ ಯಂತ್ರಗಳು 2 ಹೊತ್ತು ಉಪಯೋಗಿಸಲಾಗುತ್ತಿದೆ. ಮೊದಲು ಟ್ರಾಫಿಕ್ ಸಮಸ್ಯೆ ಆಗುತ್ತದೆ ಎಂದು 1 ಬಾರಿ ಉಪಯೋಗಿಸಲಾಗುತಿತ್ತು ಎಂದರು. ಇಂದು ಖಾಸಗಿ ಯಂತ್ರಗಳನ್ನು ಶಾರ್ಟ್ ಟರ್ಮ್ ಟೆಂಡರ್ ಮೂಲಕ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಎಲ್ಲ ರಸ್ತೆಗಳಿಗೆ ಯಂತ್ರ ಬಳಕೆ ಮಾಡಲು ಆಗುವುದಿಲ್ಲ ಬೀದಿ ಸ್ವಚ್ಛತೆ ವ್ಯತ್ಯಯ ಆಗಿದ್ದು ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಮುಷ್ಕರದಿಂದ ಜನರಿಗೆ ಕೊಂಚ ಪ್ರಮಾಣದಲ್ಲಿ ತೊಂದರೆ ಆಗಿದೆ ಎಂದರು.

ಟ್ರಕ್ ಮೌಂಟೆಡ್ ಯಂತ್ರಗಳಿಂದ ಎಲ್ಲ ರಸ್ತೆಗಳು ಕ್ಲೀನ್ ಮಾಡಲು ಸಾದ್ಯವಿಲ್ಲ:

ಬಿಬಿಎಂಪಿಯಲ್ಲಿ 16000 ಪೌರ ಕಾರ್ಮಿಕರು ಇದ್ದಾರೆ. ಸರ್ಕಾರಿ ಪೌರ ಕಾರ್ಮಿಕರು 1600 ಇದ್ದಾರೆ. 27 ಸ್ವಚ್ಛತಾ ಯಂತ್ರಗಳು ಸದ್ಯಕ್ಕೆ ನಮ್ಮಲ್ಲಿ ಇದೆ. 3 ದಿನಗಳಿಗಾಗಿ ಶಾರ್ಟ್ ಟರ್ಮ್ ಟೆಂಡರ್ ಇಂದು ಕರೆಯುತ್ತೇವೆ

ಟ್ರಕ್ ಮೌಂಟೆಡ್ ಯಂತ್ರಗಳು ಆಗಿರುವುದರಿಂದ ಎಲ್ಲ ರಸ್ತೆಗಳಲ್ಲಿ ಕ್ಲೀನ್ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.

ತಾತ್ಕಾಲಿಕ ನೇಮಕಾತಿ:

ತಾತ್ಕಾಲಿಕ ಕೆಲಸಕ್ಕೆ 4000 ಜನರನ್ನು ತೆಗೆದುಕೊಳ್ಳುತ್ತಿದ್ದೆವೆ. 15 ದಿನಗಳವರೆಗೆ ಅವರು ಸೇವೆ ಸಲ್ಲಿಸಲಿದ್ದಾರೆ. ಕಾರ್ಮಿಕ ಇಲಾಖೆಯ ನಿಯಮದ ಅನ್ವಯ ಅವರಿಗೆ 15 ದಿನಗಳಿಗೆ ಸಂಬಳ ನೀಡಲಾಗುತ್ತದೆ ಎಂದು ಘನತ್ಯಾಜ್ಯ ನಿರ್ವಹಣಾ ವಿಭಾಗದ ಬಿಬಿಎಂಪಿ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಹೇಳಿದರು.

Edited By : Nagesh Gaonkar
PublicNext

PublicNext

04/07/2022 08:58 pm

Cinque Terre

45.34 K

Cinque Terre

0

ಸಂಬಂಧಿತ ಸುದ್ದಿ