ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಂತ್ರಸ್ತ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ವರದಿ- ಬಲರಾಮ್ ವಿ

ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಕೆಆರ್ ಪುರದ ಪ್ರದೇಶಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಭೇಟಿ ನೀಡಿ ದಿನಸಿ ಕಿಟ್ ಗಳನ್ನು ವಿತರಿಸಿದರು.

ಕೆಆರ್ ಪುರದ ವಿಜಿನಾಪುರ ವಾರ್ಡನ ನಾಗಪ್ಪ ರೆಡ್ಡಿ ಬಡಾವಣೆಯಲ್ಲಿ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಬಿಜೆಪಿ ಮುಖಂಡ ಎಂಎಲ್ ಡಿಸಿ ಮುನಿರಾಜು ಅವರು ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಸೂಚನೆಯಂತೆ ದಿನಸಿ ಕಿಟ್ ಗಳನ್ನು ವಿತರಿಸಲಾಗಿದೆ ಎಂದರು.

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಹತ್ತು ಸಾವಿರ ಕಿಟ್ ಗಳನ್ನು ಹದಿನೈದು ದಿನಗಳಿಗೆ ಆಗುವಷ್ಟು ದಿನಸಿಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.ಅಕ್ಕಿ, ಗೋಧಿ, ಸಕ್ಕರೆ, ಅಡುಗೆ ಎಣ್ಣೆ, ಒಳಗೊಂಡಂತೆ ಇನ್ನಿತರ ದಿನಸಿಗಳನ್ನು‌ ವಿತರಿಸುವುದಾಗಿ ತಿಳಿಸಿದರು.

ಹಾನಿಗೊಳಗಾದ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ವಿತರಿಸಲು ಮನವಿ ಮಾಡಲಾಗಿದೆ ಎಂದರು.

Edited By :
Kshetra Samachara

Kshetra Samachara

24/05/2022 04:27 pm

Cinque Terre

2.83 K

Cinque Terre

0

ಸಂಬಂಧಿತ ಸುದ್ದಿ