ಹೊಸಕೋಟೆ: ಏಕಾಏಕಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದಾರೆಂದು ಹೊಸಕೋಟೆಯ ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರು ಹೊಸಕೋಟೆಯ ಇಂಟಿಗ್ರೇಟೆಡ್ ಸಿಸ್ಟಮ್ ಟೆಕ್ನಾಲಜಿ ಪ್ರೈ.ಲಿ. ವಿರುದ್ಧ ಪ್ರತಿಭಟನೆ ನಡೆಸಿದರು.
ಹೊಸಕೋಟೆ ಹೊರವಲಯದ ಚೊಕ್ಕಹಳ್ಳಿ ಬಳಿಯಿರುವ ಈ ಖಾಸಗಿ ಕಂಪನಿಯು ಕಾರ್ಮಿಕರ ಗಮನಕ್ಕೆ ತರದೇ ಏಕಾಏಕಿ ಕೆಲಸದಿಂದ ತೆಗೆದಿದ್ದಾರೆ. ಇದರಿಂದ ಬಡ ಯುವಕರು ಬೀದಿಪಾಲಾಗುತ್ತಿದ್ದಾರೆ ಎಂದು ಸಂಘಟನೆಯ ಹೊಸಕೋಟೆ ತಾಲೂಕು ಅಧ್ಯಕ್ಷ ಮುತ್ತು ಆಕ್ರೋಶ ವ್ಯಕ್ತಪಡಿಸಿದರು.
ಚೈನಾ ಕಂಪನಿಗಳು ಸ್ಥಳೀಯರ ಪರಿಶ್ರಮದ ಕಾರ್ಯದಿಂದ ಅಭಿವೃದ್ಧಿ ಹೊಂದುತ್ತಿವೆ. ಆದರೆ, ಸ್ಥಳೀಯರನ್ನು ದೇಶೀಯ ಕಂಪನಿಗಳೇ ನಡುನೀರಿನಲ್ಲಿ ಕೈ ಬಿಡುತ್ತಿರುವುದು ವಿಪರ್ಯಾಸ ಎಂದರು. ಕೂಡಲೇ ಕಂಪನಿಯಿಂದ ಕೈಬಿಟ್ಟ ಬಡಕಾರ್ಮಿಕರನ್ನು ಮರು ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿದರು.
Kshetra Samachara
07/04/2022 08:17 pm