ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಚಿವರಿಬ್ಬರ ಮುನಿಸು ನಗರಸಭೆ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರು

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮತ್ತು ಸಚಿವ ಎಂಟಿಬಿ ನಾಗರಾಜ್ ನಡುವಿನ ಮುನಿಸು ದೊಡ್ಡಬಳ್ಳಾಪುರ ನಗರಸಭೆ ಉದ್ಘಾಟನಾ ಕಾರ್ಯಕ್ರಮಕ್ಕೂ ತಟ್ಟಿದೆ.

ಹೌದು ಸಚಿವರಿಬ್ಬರ ಮುನಿಸಿನಿಂದ ಕಾರ್ಯಕ್ರಮಕ್ಕೆ ಇಬ್ಬರು ಗೈರಾಗಿದ್ದು, ಕೊನೆಗೆ ಕಾಂಗ್ರೆಸ್ ಶಾಸಕ ಟಿ ವೆಂಕಟರಮಣಯ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಪೌರಕಾರ್ಮಿಕರಿಂದ ಉದ್ಘಾಟನೆ ನೆರವೆರಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಎರಡು ತಿಂಗಳ ಹಿಂದೆ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದರು. ಈ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾಗಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬದಲಾದರು, ಆದರೆ ತವರು ಜಿಲ್ಲೆಯ ಮೇಲೆ ವಿಶೇಷವಾದ ಪ್ರೀತಿ ಇರುವ ಸಚಿವ ಡಾ.ಕೆ.ಸುಧಾಕರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಭೇಟಿ ನೀಡುವುದೆ ಅಪರೂಪವಾಗಿದೆ, ಇನ್ನೂ ಉಸ್ತುವಾರಿ ಸಚಿವರಾದ ನಂತರ ದೊಡ್ಡಬಳ್ಳಾಪುರ ತಾಲೂಕಿಗೆ ಒಮ್ಮೆಯು ಸಹ ಅವರು ಭೇಟಿ ನೀಡಿಲ್ಲ.

ಮಾ.16ಕ್ಕೆ ನಡೆಯಬೇಕಿದ್ದ ನಗರಸಭೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಬರುವುದ್ದಾಗಿ ಹೇಳಿದ್ದರು, ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಿಗದಿ ಸಹ ಮಾಡಲಾಗಿತ್ತು, ಆನಂತರ 5 ಗಂಟೆಗೆ ಕಾರ್ಯಕ್ರಮ ನಿಗದಿ ಮಾಡಲಾಯಿತು ಕೊನೆಗೆ ಇಬ್ಫರು ಸಚಿವರು ಕಾರ್ಯಕ್ರಮಕ್ಕೆ ಗೈರಾದ್ರು, ಶಾಸಕರಾದ ಟಿ ವೆಂಕಟರಮಣಯ್ಯ ಸಚಿವರ ಉದಾಸೀನತೆ ಖಂಡಿಸಿ ಪೌರಕಾರ್ಮಿಕರಿಂದ ಉದ್ಘಾಟನೆ ಮಾಡಿಸಿದರು.

ದೊಡ್ಡಬಳ್ಳಾಪುರ ಬಿಜೆಪಿ ಮುಖಂಡರು ಇಬ್ಬರು ಸಚಿವರ ಪರವಾಗಿ ಎರಡು ಬಣಗಳಾಗಿ ಹೊಡೆದು ಹೋಳಾಗಿದೆ, ಇದರಲ್ಲಿನ ಒಂದು ಗುಂಪಿನ ಮುಖಂಡರು ತಾರತುರಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಿಗದಿ ಮಾಡಿ ಸಿದ್ದತೆ ಮಾಡಿ ಇಷ್ಟೆಲ್ಲ ಅವಂತಾರಕ್ಕೆ ಕಾರಣವಾಗಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.

Edited By : Nirmala Aralikatti
Kshetra Samachara

Kshetra Samachara

18/03/2022 09:26 am

Cinque Terre

3.75 K

Cinque Terre

0

ಸಂಬಂಧಿತ ಸುದ್ದಿ