ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಚಿವರು ಬರಲಿಲ್ಲ-ಪೌರ ಕಾರ್ಮಿಕರೇ ಇಲ್ಲಿ ಎಲ್ಲ-ಎಂಟಿಬಿ ಗರಂ

ದೊಡ್ಡಬಳ್ಳಾಪುರ: ಸತತ ಮೂರನೇ ಬಾರಿ ಮುಂದೂಡಲ್ಪಟ್ಟಿದ್ದ ನೂತನ ನಗರ ಸಭೆ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮ, ಇಂದು ನಾಲ್ಕನೇ ಬಾರಿಯು ಸಚಿವರ ಗೈರು ಹಾಜರಿಯಿಂದ ಮುಂದೂಡಲಾಗಿತು. ಆದರೆ ಈ ಬಾರಿ ಪೌರ ಕಾರ್ಮಿಕರಿಂದ ನಗರಸಭೆ ಕಾರ್ಯಾಲಯ ಉದ್ಘಾಟನೆ ಮಾಡಲಾಗಿದೆ. ಪೌರ ಕಾರ್ಮಿಕರಿಂದ ಉದ್ಘಾಟನೆ ಮಾಡಿಸಿದಕ್ಕೆ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದರೆಂದು ಪರಿಷತ್ ಸದಸ್ಯ ರವಿ ಆರೋಪ ಮಾಡಿದ್ದಾರೆ.

2017 ರಲ್ಲಿ ದೊಡ್ಡಬಳ್ಳಾಪುರ ನಗರಸಭೆಯ ನೂತನ ಕಾರ್ಯಾಲಯಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. 2021 ರಲ್ಲಿ ಕಾಮಾಗಾರಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಸಿದ್ದವಾಗಿತ್ತು. ಮೊದಲ ಬಾರಿ ಕೋವಿಡ್ ನಿಂದ ಉದ್ಘಾಟನಾ ಕಾರ್ಯಕ್ರಮ ಮುಂದೂಡಲಾಗಿತ್ತು. ಎರಡನೇ ಬಾರಿ ಚುನಾವಣಾ ನೀತಿ ಸಂಹಿತೆಯಿಂದ ಮುಂದೂಡಲಾಯಿತು. 3 ನೇ ಬಾರಿ ಉಸ್ತುವಾರಿ ಸಚಿವರ ಬದಲಾವಣೆಯಿಂದ ಉದ್ಘಾಟನಾ ಕಾರ್ಯಕ್ರಮ ಮುಂದೂಡಲಾಗಿತ್ತು. ಇಂದು ನಾಲ್ಕನೇ ಬಾರಿ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಮತ್ತು ಪೌರಾಡಳಿತ ಸಚಿವ ಎಂಟಿವಿ ನಾಗರಾಜ್ ರವರ ಗೈರು ಹಾಜರಿಯಿಂದ ಮತ್ತೆ ಉದ್ಘಾಟನಾ ಕಾರ್ಯಕ್ರಮ ಮುಂದೂಡಲು ನಿಶ್ಚಯ ಮಾಡಲಾಗಿತ್ತು.

ಆದರೆ, ಆಡಳಿತ ಬಿಜೆಪಿ ಸರ್ಕಾರದ ಮಲತಾಯಿಧೋರಣೆ ಮತ್ತು ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ರವರ ಉದಾಸೀನತೆ ಖಂಡಿಸಿದ ಕಾಂಗ್ರೆಸ್ ಶಾಸಕರಾದ ಟಿ.ವೆಂಕಟರಮಣಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ರವಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರಸಭೆಯ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಿದರು. ನಂತರ 4 ತಿಂಗಳ ಮಗು ಅಂಕಿತ ಕೈಯಿಂದ ಶೀಲಾನ್ಯಾಸ ಮತ್ತು ಪೌರ ಕಾರ್ಮಿಕರಾದ ಮುತ್ತುರಾಜ್ ಮತ್ತು ಪೂಜಗಂಗಯ್ಯರಿಂದ ಟೇಪ್ ಕಟ್ ಮಾಡುವ ಮೂಲಕ ಕಟ್ಟಡ ಉದ್ಘಾಟನೆ ಮಾಡಲಾಯಿತು.

Edited By : Manjunath H D
PublicNext

PublicNext

16/03/2022 10:41 pm

Cinque Terre

40.2 K

Cinque Terre

1

ಸಂಬಂಧಿತ ಸುದ್ದಿ