ದೊಡ್ಡಬಳ್ಳಾಪುರ: ಕೆಲವೇ ವರ್ಷಗಳಲ್ಲಿ ಶತಮಾನ ಕಾಣಲಿರುವ ಶಾಲೆಯಲ್ಲಿ ರಂಗಮಂದಿರ ಅರ್ಧಕ್ಕೆ ನಿಂತಿದೆ. ಶಾಲಾ ಮಕ್ಕಳು ಬಿಸಿಲಲ್ಲಿ ಊಟ ಮಾಡುತ್ತಾರೆ, ಮಳೆಯ ನಡುವೆಯೇ ಪ್ರಾರ್ಥನೆ ಮಾಡುತ್ತಾರೆ. ಇನ್ನೂ ಶಾಲೆ ಕಟ್ಟಡ ಬಣ್ಣ ಕಂಡು 20 ವರ್ಷಗಳೇ ಆಗಿದೆ.
ಇದು ದೊಡ್ಡಬಳ್ಳಾಪುರ ನಗರದ ಪ್ರಥಮ ಹಾಗೂ ತಾಲೂಕಿನ ಬಹುತೇಕ ಮಂದಿ ವಿದ್ಯಾಭ್ಯಾಸ ಮಾಡಿರುವ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆ. ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1927ರಲ್ಲಿ ಸಂಸ್ಥಾನದ ನಾಲ್ಕು ಭಾಗಗಳಲ್ಲಿ ಶಾಲೆಗಳನ್ನು ತೆರೆದರು. ಆ ನಾಲ್ಕರಲ್ಲಿ ದೊಡ್ಡಬಳ್ಳಾಪುರ ಜೂನಿಯರ್ ಕಾಲೇಜ್ ಸಹ ಒಂದು. ಈ ಹಿಂದೆ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ ಇತಿಹಾಸ ಇದೆ. ಸದ್ಯ 800 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಇತಿಹಾಸ ಹೊಂದಿರುವ ಶಾಲೆಗೆ ರಂಗಮಂದಿರ ಮರಿಚಿಕೆಯಾಗಿದೆ. ಜನಪ್ರತಿನಿಧಿಗಳ 15 ಲಕ್ಷ ರೂ. ಅನುದಾನದಲ್ಲಿ ರಂಗಮಂದಿರಕ್ಕೆ ತಳಪಾಯ ಸಹ ಹಾಕಲಾಗಿದೆ. 10 ವರ್ಷ ಕಳೆದರೂ ರಂಗಮಂದಿರ ಪೂರ್ಣಗೊಂಡಿಲ್ಲ. ವಿದ್ಯಾರ್ಥಿಗಳು ಓಡಾಡುವ ಜಾಗದಲ್ಲಿ ತಳಪಾಯಕ್ಕೆ ಹಾಕಿರುವ ಕಂಬಿಗಳಿದ್ದು ವಿದ್ಯಾರ್ಥಿಗಳ ಪ್ರಾಣಕ್ಕೆ ಕುತ್ತು ತರುವಂತಿದೆ. ಶಾಲೆಗೆ ಬಣ್ಣ ಬಳಿದು 20 ವರ್ಷಗಳೇ ಆಗಿದೆ, ಶೌಚಾಲಯದ ಸಮಸ್ಯೆ ಇದೆ, ಸಂಸ್ಕೃತ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ಕೊರತೆ ಇದೆ, ಇಡೀ ಶಾಲೆಗೆ ಒಬ್ಬರೇ ಡಿ ದರ್ಜೆ ನೌಕರರಿದ್ದು 6 ಡಿ ದರ್ಜೆ ನೌಕರರ ಅಗತ್ಯ ಇದೆ.
Kshetra Samachara
05/03/2022 10:21 am