ಯಲಹಂಕ: ಸೈನಿಕರ ತವರಿನಂತಿರುವ ಯಲಹಂಕದಲ್ಲಿ BSF, ಏರ್ ಫೋರ್ಸ್ , CRPF ತರಬೇತಿ ಕೇಂದ್ರಗಳೂ ಇವೆ.
ಯಲಹಂಕದಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ಜನಮೆಚ್ಚುವ ಕೆಲಸ ಆಗಿದೆ. ಮದರ್ಡೈರಿ ರಸ್ತೆಗೆ ಸಂದೀಪ್ ಉನ್ನಿಕೃಷ್ಣನ್ ಹೆಸರಿಟ್ಟು ಗೌರವಿಸಲಾಗಿದೆ.
ಹಾಗೆಯೇ ಜಮ್ಮುಕಾಶ್ಮೀರದಲ್ಲಿ ಉಗ್ರರ ಗ್ರೆನೇಡ್ ದಾಳಿಯಲ್ಲಿ ಕರ್ನಾಟಕದ ಮೇಜರ್ ಅಕ್ಷಯ್ ಗಿರೀಶ್ ಹುತಾತ್ಮರಾದ ವೀರಯೋಧ. ಇಂತಹ ದೇಶಪ್ರೇಮಿಯ ಸ್ಮರಣಾರ್ಥ ಯಲಹಂಕದ ಶೇಷಾದ್ರಿಪುರ ಕಾಲೇಜ್ ಸರ್ಕಲ್ & ಅಲ್ಲಾಳಸಂದ್ರ ಕೆರೆ ರಸ್ತೆಯಲ್ಲಿ ಮೇಜರ್ ಅಕ್ಷಯ್ ಗಿರೀಶ್ ನಾಮಫಲಕವನ್ನು ಮರು ಅಳವಡಿಸಲಾಯಿತು. ಈ ಮೊದಲೇ ಈ ರಸ್ತೆಗೆ ಮೇ. ಅಕ್ಷಯ್ ನಾಮಕರಣ ಮಾಡಿ ಬೋರ್ಡ್ ಅಳವಡಿಸಲಾಗಿತ್ತು. ಆದರೆ, ಲಾರಿ ಗುದ್ದಿದ್ದರಿಂದ ನಾಮಫಲಕ ನಾಶವಾಗಿತ್ತು.
ಈ ಸಂದರ್ಭ ಶಾಸಕ ವಿಶ್ವನಾಥ್ ಮಾತನಾಡಿ, ನಮ್ಮ ಸರ್ಕಾರ ಸೈನಿಕರಿಗೆ ಸಕಲ ಗೌರವ ಸಮರ್ಪಿಸಿದೆ ಎಂದರು. ಮೇಜರ್ ಗಿರೀಶ್ ಅವರ ತಾಯಿ ಮೇಘನಾ ಸರ್ಕಾರದ ಸ್ಪಂದನೆಗೆ ಧನ್ಯವಾದ ಅರ್ಪಿಸಿದರು. ನಿವೃತ್ತ ಸೈನಿಕರು, ಮೇ. ಅಕ್ಷಯ್ ಅವರ ಪತ್ನಿ- ಮಗಳು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು.
ಸ್ಲಗ್: ʼವೀರಯೋಧರ ಸ್ಮರಣೆ ಇರಲಿ ಸದಾʼ
Kshetra Samachara
06/02/2022 04:05 pm