ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ನಗರದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಿ; ಪೊಲೀಸರಿಗೆ ಜೆಡಿಎಸ್ ಮನವಿ

ಆನೇಕಲ್: ಆನೇಕಲ್ ನಗರದಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆನೇಕಲ್ ಪೊಲೀಸರಿಗೆ ಜೆಡಿಎಸ್ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

ಆನೇಕಲ್ ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ಹಾಗೂ ಆಂಬ್ಯುಲೆನ್ಸ್ ಓಡಾಡಲು ತೊಂದರೆ ಆಗುತ್ತಿರುವುದನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಜೆಡಿಎಸ್ ಆನೇಕಲ್ ತಾಲ್ಲೂಕು ಸಂಘಟನ ಕಾರ್ಯದರ್ಶಿ ರುದ್ರೇಶ್ ಹಾಗೂ ಸ್ನೇಹಿತರು ಆನೇಕಲ್ ಸರ್ಕಲ್ ಇನ್ಸ್‌ಪೆಕ್ಟರ್ ಮಹಾನಂದ್ ಅವರಿಗೆ ಮನವಿ ಪತ್ರವನ್ನು ನೀಡಿದ್ದಾರೆ.

ಇನ್ನು ಆನೇಕಲ್‌ನ ಶ್ರೀರಾಮ್ ಕುಟೀರದಿಂದ ಹಿಡಿದು ಆನೇಕಲ್ ಟೌನ್ ಚೌಡೇಶ್ವರಿ ದೇವಸ್ಥಾನದವರೆಗಿನ ರಸ್ತೆ ಮಧ್ಯದಲ್ಲಿ ಗಾಡಿಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ಜೊತೆಗೆ ತಳಿ ರಸ್ತೆ ಅಗಲೀಕರಣದ ಕಾರಣ ಆನೇಕಲ್ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಮ್ಮ ಮನವಿಗೆ ಸ್ಪಂದಿಸದ ಕಾಲಹರಣ ಮಾಡಿದ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದಾಗಿ ಜೆಡಿಎಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

01/02/2022 06:46 pm

Cinque Terre

458

Cinque Terre

0

ಸಂಬಂಧಿತ ಸುದ್ದಿ