ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಮಹಿಳೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಆಮ್ ಆದ್ಮಿ ಪಾರ್ಟಿಯಿಂದ ಇಂದು ರಸ್ತೆ ತಡೆದು ಪ್ರತಿಭಟಿಸಲಾಯಿತು.
ರಸ್ತೆ ಗುಂಡಿಗೆ ಮಹಿಳೆ ಬಲಿಯಾದ್ರೂ ಎಚ್ಚೆತ್ತುಕೊಳ್ಳದ ಸೋಂಬೇರಿ ಅಧಿಕಾರಿಗಳ ವಿರುದ್ಧ ಆಪ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಹಿಳೆ ಸಾವಿಗೆ ರಸ್ತೆ ಗುಂಡಿನೇ ನೇರ ಕಾರಣವಾಗಿದ್ದು, ಈ ಹೊಂಡಾಗುಂಡಿಗೆ ಮೂಲ ಕಾರಣಕರ್ತರು ಅಧಿಕಾರಿಗಳು ಮತ್ತು ರಾಜಕಾರಣಿಗಳು ಎಂದೂ ಪ್ರತಿಭಟನೆಕಾರರು ಆರೋಪಿಸಿದರು.
ಮಾಗಡಿ ರಸ್ತೆಯ ಅಂಜನಾ ನಗರದಲ್ಲಿ ರಸ್ತೆ ತಡೆ ಮಾಡಲಾಯಿತು. ಅಪಘಾತ ಸ್ಥಳದಲ್ಲೇ ರಸ್ತೆ ತಡೆದು ಪ್ರತಿಭಟಿಸಿದ ಆಪ್ ಕಾರ್ಯಕರ್ತರು ಸುಮಾರು ಎರಡು ಗಂಟೆವರೆಗೆ ಪ್ರತಿಭಟನೆ ನಡೆಸಿದರು. ನಿನ್ನೆ ಗುಂಡಿ ತಪ್ಪಿಸಲು ಸವಾರ ಯತ್ನಿಸುತ್ತಿದ್ದಾಗ ಆಯತಪ್ಪಿ ಬೈಕ್ ಬಿದ್ದಿತ್ತು. ಈ ವೇಳೆ ಬೈಕ್ ಹಿಂಬದಿ ಸವಾರೆ ಶರ್ಮಿಳಾ ಎಂಬವರು ರಸ್ತೆಗೆ ಬಿದ್ದಿದ್ದು, ಅವರ ಮೇಲೆಯೇ ಗೂಡ್ಸ್ ಗಾಡಿ ಹರಿದು ಮೃತರಾಗಿದ್ದರು.
Kshetra Samachara
31/01/2022 02:25 pm