ಬೆಂಗಳೂರು: ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಕಳೆದ ಕೆಲ ದಿನಗಳಿಂದ ಬಹಳ ಸಂಕಷ್ಟ ಎದುರಿಸುತ್ತಿದ್ದು, ನಾಗಸಂದ್ರ ಮತ್ತು ಪೀಣ್ಯ ನಡುವಿನ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ನಿಮಿತ್ತ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಈ ದುರಸ್ತಿ ಕಾರ್ಯ ವಿಳಂಬ ಸಮಸ್ಯೆ ಏನೆಂದು ಅರಿಯಲು ಇಂದು ಶಾಸಕ ಸುರೇಶ್ ಕುಮಾರ್ ದುರಸ್ತಿ ಕಾಮಗಾರಿ ನಡೆಯುತ್ತಿರುವ 8ನೇ ಮೈಲಿ ಮೆಟ್ರೋ ನಿಲ್ದಾಣದ ಹತ್ತಿರ ಪಿಲ್ಲರ್ ಸಂಖ್ಯೆ 102 ರ ಬಳಿಗೆ ಭೇಟಿ ನೀಡ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡ, ಕಾಮಗಾರಿ ನಡೆಸುತ್ತಿರುವ ಅಭಿಯಂತರರ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸದ್ಯ ಈ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು IISC (ಟಾಟಾ ಇನ್ಸ್ಟಿಟ್ಯೂಟ್) ಪರಿಣಿತರು ನೀಡುವ ಅಭಿಪ್ರಾಯಕ್ಕಾಗಿ ಕಾಯಲಾಗುತ್ತಿದ್ದು, ಇನ್ನೊಂದು ವಾರದಲ್ಲಿ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.
ಕಳೆದ ಕೆಲವು ದಿನಗಳಿಂದ ಮೇಲ್ಸೇತುವೆಯ ಸಂಚಾರವು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೆಳ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರಿಗೆ ಕಿರಿಕಿರಿ ಅನುಭವಿಸುತ್ತಿದ್ದ ವಾಹನ ಸವಾರರಿಗೆ ನಿರಾಳ ವಾಗಲಿದೆ. ಈ ಕಾಮಗಾರಿಯ ಜವಾಬ್ದಾರಿ ಹೊತ್ತ ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿನ ಜನರಲ್ ಮ್ಯಾನೇಜರ್ ಕರ್ನಲ್ ಜಾನ್ಬಾಜ್ (Col Janbaaz)ರೊಂದಿಗೆ ಹಾಗೂ ಸಂಚಾರಿ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನೆಡೆಸಿದ್ದು, ಇನ್ನೊಂದು ವಾರದೊಳಗೆ ಮೆಲ್ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡುವುದಾಗಿ ರಾ.ಹೆ.ಪ್ರಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Kshetra Samachara
20/01/2022 03:28 pm