ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದಿದೀಪಗಳ ನಿರ್ವಹಣೆ BBMP ಜವಾಬ್ದಾರಿ : CM ಬೊಮ್ಮಾಯಿ

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರಿನ ಪ್ರಮುಖ ಆರ್ಟೀರಿಯಲ್ ರಸ್ತೆಗಳ ಪ್ರತಿ ಕಾಮಗಾರಿಯ ಬಗ್ಗೆ ರೋಡ್ ಹಿಸ್ಟರ್ ನಿರ್ವಹಣೆ ಮಾಡಬೇಕು. ನಗರದ ಬೀದಿ ದೀಪಗಳಿಗೆ ಎಲ್ ಇಡಿ ಲೈಟ್ ಅಳವಡಿಸಲು ಮರು ಟೆಂಡರ್ ಆಗುವವರೆಗೆ ಬಿಬಿಎಂಪಿಯೇ ನಿರ್ವಹಣೆ ಮಾಡಬೇಕೆಂದು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಿಎಂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಪದೇ ಪದೇ ರಿಪೇರಿ ಮಾಡುತ್ತಿರುವ ಬಗ್ಗೆ ಆರೋಪಗಳು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿ ಆರ್ಟೀರಿಯಲ್ ರಸ್ತೆಗಳಲ್ಲಿ ನಡೆಯುವ ಕಾಮಗಾರಿಗಳ ಹಿಸ್ಟರಿ ನಿರ್ವಹಣೆಗೆ ಈಗಾಗಲೇ ಆಯುಕ್ತರಿಗೆ ಸೂಚಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವಾರು ಯೋಜನೆಗಳು ನಡೆಯುತ್ತಿದ್ದು, ಈ ಬಗ್ಗೆ ಯಾವುದೇ ಸಲಹೆಗಳಿದ್ದರೆ ನೀಡಬಹುದು ಎಂದರು.

ಪಾಲಿಕೆ ವ್ಯಾಪ್ತಿಯ ಎಲ್ಲಾ ಬೀದಿ ದೀಪಗಳಿಗೆ ಎಲ್ ಇಡಿ ಲೈಟ್ ಅಳವಡಿಕೆಗೆ ಶಾಪೂರ್ಜಿ ಪೋಲಾಂಜಿ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಆದರೆ, ಆ ಕಂಪನಿಯಿಂದ ಯೋಜನೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಮರು ಟೆಂಡರ್ ಆಗುವವರೆಗೂ ಕಾಯದೆ ಬಿಬಿಎಂಪಿಯೇ ಅಲ್ಲಿಯವರೆಗೂ ಬೀದಿ ದೀಪಗಳ ನಿರ್ವಹಣೆ ಮಾಡುವಂತೆ ಸೂಚಿಸಲಾಗಿದೆ. ಮರು ಟೆಂಡರ್ ನಲ್ಲಿ ಮೊದಲು ಯೋಜನೆ ಕೈಗೊಳ್ಳಲು ವಿಫಲವಾಗಿರುವ ಕಂಪನಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.

Edited By : Nirmala Aralikatti
Kshetra Samachara

Kshetra Samachara

17/12/2021 11:15 am

Cinque Terre

312

Cinque Terre

0

ಸಂಬಂಧಿತ ಸುದ್ದಿ