ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬ್ಯಾಟರಾಯನಪುರದಲ್ಲಿ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಸಿದ್ದರಾಮಯ್ಯ, ಕೃಷ್ಣಭೈರೇಗೌಡ ಭೇಟಿ

ಯಲಹಂಕ: ಕಳೆದ ಮಂಗಳವಾರ ಬೆಂಗಳೂರು ಸೇರಿದಂತೆ ‌ಯಲಹಂಕ ಸುತ್ತಮುತ್ತ ‌ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳಿಗೆ‌ ನೀರು ನುಗ್ಗಿ ಅನೇಕ ಅವಾಂತರ ಸೃಷ್ಟಿಯಾಗಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಬ್ಯಾಟರಾಯನಪುರ ಶಾಸಕ‌ ಕೃಷ್ಣಭೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಹೆಬ್ಬಾಳ ಶಾಸಕ‌ ಬೈರತಿ ಸುರೇಶ್, ರಿಜ್ವಾನ್ ಹರ್ಷದ್ ಅವರ ತಂಡ ಜೊತೆಗೂಡಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಮಳೆಹಾನಿಗೊಳಗಾದ ಪ್ರದೇಶಗಳಿಗೆ ಭೇಟಿಕೊಟ್ಟು ಪರಿಶೀಲಿನೆ ನಡೆಸಿದರು.

ಬ್ಯಾಟರಾಯನಪುರ ಕ್ಷೇತ್ರದ ಫಾತಿಮಾನಗರ, ಥಣಿಸಂದ್ರ ವಾರ್ಡ್‌ಗೆ ಸೇರಿದ ಕೆಲವು ಪ್ರದೇಶ ಮಳೆಯಿಂದ ತೀವ್ರ ಹಾನಿಗೊಳಗಾಗಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ತೀವ್ರ ತೊಂದರೆಯಾಗಿತ್ತು. ಇಂತಹ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು.

ಇದೇ ವೇಳೆ ಮಾತನಾಡಿದ ಬ್ಯಾಟರಾಯನಪುರ ಶಾಸಕ ಕೃಷ್ಣಭೈರೇಗೌಡ ಕಳೆದ ಸಲ ಮಳೆಯಿಂದ ನಮ್ಮ ಭಾಗದಲ್ಲಿ ಅನೇಕ ತೊಂದರೆಯಾಗಿದ್ದವು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ‌ ನೀಡಿ 1500 ಕೋಟಿ ರೂ. ಪರಿಹಾರ ಘೋಷಿಸಿದ್ದರು. ಇದುವರೆಗೂ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲವೆಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

SureshBabu Public Next ಯಲಹಂಕ..

Edited By :
PublicNext

PublicNext

19/05/2022 07:11 pm

Cinque Terre

37.64 K

Cinque Terre

3

ಸಂಬಂಧಿತ ಸುದ್ದಿ