ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆಸರಘಟ್ಟ ವ್ಯಾಪ್ತಿಯಲ್ಲಿ 'ಸಂರಕ್ಷಿತ ವಲಯ' ಬೇಡವೆಂದು ಸ್ಥಳೀಯರು ಹಸು-ಎಮ್ಮೆ ಬಿಟ್ಟು ಪ್ರತಿಭಟನೆ

ಯಲಹಂಕ: ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಹೆಸರಘಟ್ಟ ಬಳಿ ಸರ್ಕಾರದ 5500 ಎಕರೆಗೂ ಹೆಚ್ಚಾದ ಸರ್ಕಾರಿ ಜಮೀನಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಹೆಸರಘಟ್ಟ ಕೆರೆ, ಬ್ಯಾತ-ಸಿರೇಸಂದ್ರ ಕೆರೆ, ಹುಲ್ಲುಗಾವಲು ಪ್ರದೇಶ ಇದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸೇರಿದ ಕೋಳಿ ಹಂದಿ, ಉದ್ಯಮ, ಪಶುಸಂಗೋಪನೆ, ಕೆಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(IIHR) ಸೇರಿದಂತೆ ವಿವಿಧ ಇಲಾಖೆಗಳಿದ್ದು, ಸಾವಿರಾರು ಎಕರೆ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿವೆ. ಸ್ಥಳೀಯ ರೈತರು ಹೈನುಗಾರಿಕೆ ಮೂಲಕವೇ ಜೀವನ ನಡೆಸುತ್ತಿದ್ದಾರೆ.

ಆದರೆ ಮಹೇಶ್ ಭಟ್ ಎಂಬ ವ್ಯಕ್ತಿ ಹೆಸರಘಟ್ಟ ಸುತ್ತಮುತ್ತ ‌ಹತ್ತಾರು ಪ್ರಾಣಿ ಪಕ್ಷಿಗಳಿವೆ. ಆದ್ದರಿಂದ ಈ ಪ್ರದೇಶವನ್ನು "ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಯುತ್ತಿದೆ. ಸ್ಥಳೀಯ ಶಾಸಕ ವಿಶ್ವನಾಥ್ ಈ ಬಗ್ಗೆ ಸದನದಲ್ಲೆ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಐದು ಸಾವಿರ ಎಕರೆಲಿರುವ 50ಕ್ಕು ಹೆಚ್ಚು ಹಳ್ಳಿಜನ ಇದೀಗ ಪ್ರತಿಭಟನೆಗೆ ಇಳಿದಿದ್ದಾರೆ. ದೂರುದಾರ ಮಹೇಶ್ ಭಟ್ ಮನೆಗೆ ಹಸು, ಎಮ್ಮೆ, ಜಾನುವಾರು ಬಿಟ್ಟು‌ ಪ್ರತಿಭಟಿಸಿ, ಮಹೇಶ್ ಭಟ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸದನದಲ್ಲೂ ಈ ಬಗ್ಗೆ ಯಲಹಂಕ ಶಾಸಕ ಮಾತನಾಡಿದ್ದಾರೆ. ಈ ಪ್ರದೇಶವನ್ನು ಸುರಕ್ಷಿತವಲಯ ಎಂದು ಘೋಷಿಸಿದರೆ ಜನ-ದನಗಳ ಬದುಕು ಈ ಭಾಗದಲ್ಲಿ ದುಸ್ಥರ ಆಗ್ತದೆ. ಇದೀಗ ಸರ್ಕಾರವೂ ಸಹ ಜನ ವಿರುದ್ಧದ ಯೋಜನೆ ಕೈಬಿಡಲು ನಿರ್ಧರಿಸಿದೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..

Edited By : Somashekar
PublicNext

PublicNext

25/09/2022 09:06 am

Cinque Terre

35.69 K

Cinque Terre

0

ಸಂಬಂಧಿತ ಸುದ್ದಿ