ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರಾಭಿವೃದ್ಧಿ ಸಚಿವರ ಕ್ಷೇತ್ರದ ಲೇಔಟಿಗೆ ಬೃಹತ್ ರಾಜಕಾಲುವೆಯೇ ದೊಡ್ಡ ಕಂಟಕ

ಬೆಂಗಳೂರು: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜರ ವಿಧಾನಸಭಾ ಕ್ಷೇತ್ರದ ಬೃಹತ್ ರಾಜಕಾಲುವೆ ಅಕ್ಕಪಕ್ಕದ ಜನರ ಪಾಲಿಗೆ ವಿಲನ್ ಆಗ್ತಿದೆ. ಇದಕ್ಕೆ ಕಾರಣ ರಾಜಕಾಲುವೆ ನೀರು ಕಿರಿದಾದ ರೈಲ್ವೆ ಅಂಡರ್ಪಾಸ್ ನ ಸಣ್ಣದಾದ ಚಾನಲ್‌ಗಳ ಮೂಲಕ‌ ಹಾದು ಹೋಗುವುದು. ಒಂದೇ ಸಲ ರಾಜಕಾಲುವೆಲಿ ಅತಿಯಾದ ನೀರು ಬಂದರೆ, ಸರಾಗವಾಗಿ‌ ಮುಂದಕ್ಕೆ ಹರಿಯದೆ ಹಿಮ್ಮುಖವಾಗಿ ಹರಿದರೆ ರಾಜಕಾಲುವೆ ಅಕ್ಕಪಕ್ಕದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ಆಗುತ್ತಿದೆ. ರಾತ್ರಿ ಸಹ ಜೋರು ಮಳೆಯಾದ ಕಾರಣ ಹೊರಮಾವು ವಾರ್ಡ್ನಿನ 1ನೇ ಕ್ರಾಸಿನಲ್ಲಿರುವ ಸಾಯಿಬಾಬಾ ಬಡಾವಣೆಯ ನೂರಾರು ಮನೆಗಳಿಗೆ ನೀರು ನುಗ್ಗಿ ದೊಡ್ಡಮಟ್ಟದ ಅವಾಂತರಗಳಾಗಿವೆ. ಇದರಿಂದ ಜನರು ಪರದಾಡುವಂತಾಗಿದೆ.

ರೈಲ್ವೆ ಸೇತುವೆ ಚಾನಲ್ಸ್‌ಗಳಲ್ಲಿ ದೊಡ್ಡಮಟ್ಟದ ನೀರು ಹರಿಯುವುದು ಕಷ್ಟ. ಆದ್ದರಿಂದ ಕಳೆದ ಮೇ ತಿಂಗಳಲ್ಲಿ ಬಿದ್ದ ಭಾರಿ ಮಳೆಯಿಂದ ಸಮಸ್ಯೆಯಾಗಿ ಖುದ್ದು ಸಿಎಂ ಬೊಮ್ಮಾಯಿ ಭೇಟಿ ನೀಡಿ ರೈಲ್ವೆ ಸೇತುವೆಗೆ ಮತ್ತಷ್ಟು ರೈಲ್ವೆ ಅಂಡರ್ ಪಾಸ್ ಚಾನಲ್ಸ್-ಕಾಲುವೆ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ಸಾಯಿಬಾಬಾ ಲೇಔಟ್ 1ನೇಕ್ರಾಸ್ ನೀರು ನುಗ್ಗಿದ ಮುಖ್ಯರಸ್ತೆಲಿ ಕಾಲುವೆ ಅಗೆದು, ನೀರನ್ನು ಚರಂಡಿಗೆ ಬಿಡಲಾಯ್ತು. ಇಂದು ಸಾಯಿಬಾಬ ಲೇಔಟ್ ಸಮಸ್ಯೆ ಸ್ಥಳಕ್ಕೆ ಖುದ್ದು ಬೈರತಿ ಬಸವರಾಜು ಭೇಟಿ ನೀಡಿ, ಸಿಎಂ ರವರು 17ಕೋಟಿ ಬಿಡುಗಡೆ ಮಾಡಿದ್ದಾರೆ, ಮಳೆಗಾಲ ಮುಗಿದ ಕೂಡಲೇ ರೈಲ್ವೆ ಸೇತುವೆಗೆ ಹೊಸ ನೀರು ಕಾಲುವೆ ಚಾನಲ್ಸ್ ನ ಅಳವಡಿಸಿ ಸಮಸ್ಯೆ ಬಗೆಹರಿಸ್ತೇವೆ ಎಂದರು.

ಬೆಂಗಳೂರಿನಲ್ಲಿ ಮಳೆ ಬಂದರೆ ಒಂದಲ್ಲಾ ಒಂದು ಕಡೆ ಸಮಸ್ಯೆ ಆಗ್ತಲೇ ಇರುತ್ತವೆ. ಸಾಯಿಬಾಬ ಲೇಔಟ್ ಸ್ಥಳಕ್ಕೆ ಬೆಂಗಳೂರು ಕಮೀಷನರ್ ತುಷಾರ್ ಗಿರಿನಾಥ್ ಸಹ ಭೇಟಿ ನೀಡಿದರು. ರಾಜಕಾಲುವೆ ಹರಿಯುವ ರೈಲ್ವೆ ಸೇತುವೆಯಲ್ಲಿ ಇನ್ನಷ್ಟು ಚಾನಲ್ಸ್ ನ ಓಪನ್ ಮಾಡ್ತೇವೆ ಎಂದರು.

ಸಿವಿ.ರಾಮನ್ ನಗರ, ಹೆಬ್ಬಾಳ, ಯಲಹಂಕ, ಬ್ಯಾಟರಾಯನಪುರ ಸುತ್ತಮುತ್ತಲ ನೀರು ಇದೇ ಬೃಹತ್ ರಾಜಕಾಲುವೆ ಮೂಲಕ ಹರಿದು ಮುಂದೆ ಸಾಗ್ತದೆ. ತಗ್ಗು‌ಪ್ರದೇಶಗಳ ಜನ ಎಚ್ಚರಿಕೆಯಿಂದ ಇರದಿದ್ದ್ಲಿ‌ಮುಂದೆ ಬೆಂಗಳೂರು ಮತ್ತಷ್ಟು ಸಮಸ್ಯೆ ಎದುರಿಸಿವುದು‌ ಗ್ಯಾರೆಂಟಿ..

Edited By : Somashekar
PublicNext

PublicNext

03/08/2022 07:57 pm

Cinque Terre

30 K

Cinque Terre

0

ಸಂಬಂಧಿತ ಸುದ್ದಿ