ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಡಿಎ 2ನೇಹಂತದ ಭೂಸ್ವಾಧೀನ ವಿರುದ್ಧ ಬೀದಿಗಿಳಿದ ರೈತರು

ಬೆಂಗಳೂರು: ಈಗಾಗಲೇ ಬಿಡಿಎ ಬಡಾವಣೆ ನಿರ್ಮಾಣ ಹೆಸರಲ್ಲಿ ಹತ್ತಾರು ಕೆರೆ ನುಂಗಿ, ಅನೇಕ ಎಡವಟ್ಟು ಮಾಡಿಕೊಂಡು ‌ಕುಖ್ಯಾತಿಗೆ ಪಾತ್ರವಾಗಿದೆ. ಇದೀಗ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಹೆಸರಲ್ಲಿ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ17 ಹಳ್ಳಿಗಳ 3545ಎಕರೆ ಭೂಸ್ವಾಧೀನಕ್ಕೆ ಮುಂದಾಗಿ ತೀವ್ರ ಪ್ರತಿಭಟನೆ ಎದುರಿಸಿದೆ. ರೈತರು ನೂರಾರು ದಿನಗಳಿಂದ ಭೂಮಿ ಕೊಡಲ್ಲ ಎಂದು ಹೋರಾಡುತ್ತಲೇ ಇದ್ದಾರೆ.

ಇದೀಗ ಮತ್ತೆ ಯಲಹಂಕದ ರಾಮಗೊಂಡನಹಳ್ಳಿ ಗ್ರಾಮಕ್ಕೆ ಸೇರಿದ 252 ಎಕರೆ ಜಮೀನನ್ನು ಎರಡನೆ ಹಂತ ಹೆಸರಲ್ಲಿ ಸ್ವಾಧೀನಕ್ಕೆ ಮುಂದಾಗಿದೆ. ಇದರಿಂದ ರೈತರು ಮತ್ತು ಸ್ಥಳೀಯರು ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ. ಹೋರಾಟದ ಫಲವಾಗಿ ರಾಮಗೊಂಡನಹಳ್ಳಿ ರೈತರು 182 ದಿನ ಧರಣಿ ನಡೆಸಿದ್ದಾರೆ. ಇಂದು ಮತ್ತಷ್ಟು ಕೋಪಗೊಂಡ ರೈತ ಬಿಡಿಎ ಭೂಸ್ವಾಧೀನ ವಿರೋಧಿಸಿ "ಗಂಗಮ್ಮ ನೀರಲ್ಲಿ ಜಡಿ ಹಾಕ್ತಿದ್ದಾಳೆ" ಎಂಬ ಬಿಡಿಎ ವಿರುದ್ಧದ ವಿಡಂಬನಾತ್ಮಕ ನಾಟಕ ಸ್ಥಳೀಯರ ಹಾಗೂ ರೈತರ ಚಪ್ಪಾಳೆ ಗಿಟ್ಟಿಸಿತು. ಕೋಲಾರದ ಬುಡ್ಡಿದೀಪ ತಂಡದ ತಮಟೆ, ಹಾಡು, ನೃತ್ಯ ಸಾಹಸಭರಿತ ಹೋರಾಟದ ನಾಟಕ ರೈತಪರ ಕಾಳಜಿ ಮೆರೆಯಿತು.

ನಗರೀಕರಣ ಮತ್ತು ನಾಗರೀಕತೆಯ ಹೆಸರಲ್ಲಿ ಬಿಡಿಎ ಸ್ಥಳೀಯ 17ಹಳ್ಳಿಗಳ ಸಾವಿರಾರು ಎಕರೆ ರೈತರ ಜಮೀನನ್ನು ಕಸಿದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ.

Edited By : Somashekar
PublicNext

PublicNext

21/09/2022 01:05 pm

Cinque Terre

21.42 K

Cinque Terre

2

ಸಂಬಂಧಿತ ಸುದ್ದಿ