JJR ನಗರದಲ್ಲಿನ ಸ್ಮಶಾನದ ವಿವಾದ ವಿಚಾರ ರಾಜಕೀಯ ದುರುದ್ದೇಶದಿಂದ ಕೂಡಿದ್ದು ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಇಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಸೀಮಾ ಅಲ್ತಾಫ್ ಖಾನ್ ದಾಖಲೆ ಬಿಡುಗಡೆ ಮಾಡಿದರು.
ಹೌದು. ಕಳೆದ ಮೂರ್ನಾಲ್ಕು ತಿಂಗಳಿನಿಂದ ಧರ್ಮದ ದಂಗಲ್ ಶುರುವಾಗಿದೆ. ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ಬೂದಿ ಮುಚ್ಚಿದ ಕೆಂಡದಂತಿರುವಾಗ ಮತ್ತೊಂದು ವಿವಾದ ತಲೆ ಎತ್ತಿದೆ. ಕಳೆದ ತಿಂಗಳು ಹಿಂದೂ ವಿಶ್ವ ಸನಾತನ್ ಪರಿಷತ್ ಭಾಸ್ಕರನ್ ಅವರು ಜೆ.ಜೆ.ಆರ್ ನಗರದ ರುದ್ರಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿ ,ಈ ಸ್ಥಳದಲ್ಲಿ ಸುಮಾರು 2 ಸಾವಿರ ಶವಗಳ ಸಂಸ್ಕಾರ ಮಾಡಲಾಗಿದೆ. ಆ ಸಮಾಧಿಗಳನ್ನು ನಾಶ ಪಡಿಸಿ ಪಾಲಿಕೆ ಸೌಧವನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದರು.
ನಿಜ, ಇದೇ ವಿಚಾರವಾಗಿ ಇಂದು ಅದೇ ಪಾಲಿಕೆ ಸೌಧದಲ್ಲಿ ದಾಖಲೆ ಸಮೇತ ಮಾಜಿ ಕಾರ್ಪೊರೇಟರ್ ಸೀಮಾ ಅಲ್ತಾಫ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಹಿಂದೆಯೂ ಕೂಡ ಇದೇ ಜಾಗದಲ್ಲಿ ಪಾಲಿಕೆಯಹಳೆ ಕಟ್ಟಡವಿತ್ತು. ಜೊತೆಗೆ ಅಂಗನವಾಡಿ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಬಿಬಿಎಂಪಿ ಹಲವು ಕಚೇರಿಗಳು ಇದೇ ಜಾಗದಲ್ಲಿದ್ದವು. ಸ್ಥಳೀಯ ಜನರ ಮನವಿ ಮೇರೆಗೆ ಹೊಸ ಪಾಲಿಕೆ ನಿರ್ಮಿಸಲಾಗಿದೆ. ಇನ್ನು ಈ ಹಿಂದೆ ಇದಂತಹ ಆರೋಗ್ಯ ಇಲಾಖೆ, ಇಂಜಿನಿಯರ್ ಆಫೀಸ್, ಅಂಗನವಾಡಿ, ಕಂದಾಯ ಇಲಾಖೆಯನ್ನು ಸ್ಥಳೀಯರ ಒತ್ತಾಯಕ್ಕೆ ಹೊಸ ಪಾಲಿಕೆ ಸೌಧದಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಇನ್ನು ಕಳೆದ ಹತ್ತು ವರ್ಷಗಳ ಹಿಂದೇ ಹಳೆಯ ಕಟ್ಟಡಕ್ಕೆ ಪಾಲಿಕೆಯಿಂದಲೇ ಪಿಐಡಿ ನಂಬರ್ ನೀಡಲಾಗಿತ್ತು ಎಂದ ದಾಖಲೆ ಸಮೇತ ತಿಳಿಸಿದರು.
ಇನ್ನು ಚಾಮರಾಜಪೇಟೆ ಕ್ಷೇತ್ರದಲ್ಲಿ ಎಲ್ಲರೂ ಸಹ ಬಾಳ್ವೆಯಿಂದ ಜೀವನ ನಡೆಸುತ್ತಿದ್ದೆವೆ. ಈ ಕ್ಷೇತ್ರದಲ್ಲಿ ಧರ್ಮದ ಹೆಸರಲ್ಲಿ ಕೆವರು ವಿಷದ ಬೀಜ ಬಿತ್ತುತ್ತಿದ್ದಾರೆ. ಇದು ಈ ಕ್ಷೇತ್ರದಲ್ಲಿ ನಡೆಯಲ್ಲ. ಇನ್ನು ರುದ್ರಭೂಯಲ್ಲಿ ಹಾಗೂ ಪಾಲಿಕೆ ಸೌಧದ ವಿಚಾರದಲ್ಲಿ ಸುಕಸುಮ್ಮನೆ ಸುಳ್ಳು ಹೇಳಿಕೆ ನೀಡಬಾರದು. ಚುನಾವಣೆ ದೃಷ್ಟಿಯಿಂದ ಈ ಆರೋಪಗಳು ಕೇಳಿ ಬರುತ್ತಿವೆ. ಈ ರೀತಿ ಆರೋಪ ಮಾಡುವವರು ನೇರವಾಗಿ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ನೇರವಾಗಿಯೇ ಸವಾಲು ಹಾಕಿದರು. ಸ್ಥಳೀಯ ಹಿರಿಯ ನಾಗರಿಕರು ಸಹ ನಮ್ಮ ಮನವಿ ಮೇರೆಗೆ ಪಾಲಿಕೆ ಕಟ್ಟಡ ಕಟ್ಟಿದ್ದಾರೆಂದು ಹೇಳಿದರು.
ಒಟ್ನಲ್ಲಿ ಧರ್ಮದ ವಿಚಾರದಲ್ಲಿ ಸಾಕಷ್ಟು ಸಮಾಜದ ಶಾಂತಿ ಕದಡುವಂತಹ ಘಟನೆಗಳು ಒಂದರ ನಂತರ ಮತ್ತೊಂದು ಮುನ್ನಲೇಗೆ ಬರುತ್ತಿವೆ. ಇನ್ನು ಈ ಸ್ಮಶಾನ ಮತ್ತು ಪಾಲಿಕೆ ಸೌಧದ ವಿಚಾರ ಇದ್ಯಾವ ಸ್ವರೂಪ ಪಡೆಯುತ್ತದೆ ಎಂದು ಕಾದು ನೋಡಬೇಕು.
ವರದಿ - ಗಣೇಶ್ ಹೆಗಡೆ
PublicNext
20/07/2022 08:59 pm