ಬೆಂಗಳೂರು: ಅದು ಸಾವಿರಾರು ಜನಕ್ಕೆ ವಿದ್ಯಾದಾನ ಮಾಡಿದ ವಿದ್ಯಾಸಂಸ್ಥೆ. ಆದರೆ ಈಗಿನ ಸ್ಥಿತಿ ನೋಡಿದರೆ ನಿಜಕ್ಕೂ ಶೋಚನೀಯ. ರಾತ್ರಿ ಆದರೆ ಅನೈತಿಕ ಚಟುವಟಿಕೆಗಳ ತಾಣವಾಗಿ, ಪುಂಡು ಪೋಕರಿಗಳ ಆವಾಸಸ್ಥಾನವಾಗಿ ಬದಲಾಗಿದೆ.
ಒಂದು ಕಡೆ ಕಸದ ರಾಶಿ ಮತ್ತೊಂದು ಕಡೆ ಸುತ್ತಲೆಲ್ಲಾ ಗಿಡಗಂಟೆಗಳು ಕಲ್ಲಿನ ರಾಶಿಗಳು. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಆನೇಕಲ್ ತಾಲೂಕಿನ ಕೂಡ್ಲುನಲ್ಲಿ. ಸರ್ವೇ ನಂಬರ್ 74ರಲ್ಲಿ 1ಎಕರೆ 4ಗುಂಟೆ ಜಾಗದಲ್ಲಿ ಸರ್ಕಾರಿ ಮಾಧ್ಯಮಿಕ ಪಾಠಶಾಲೆ ಕಟ್ಟಲು ಆನೇಕಲ್ ಶಾಸಕ ಶಿವಣ್ಣ ಗುದ್ದಲಿ ಪೂಜೆಗೆ ಚಾಲನೆ ನೀಡಿದರು. ಆದರೆ ಕಳೆದ ಆರು ತಿಂಗಳು ಕಳೆದರೂ ಸಹ ಕೆಲಸ ಆರಂಭವಾಗದೆ ನೆನಗುದಿಗೆ ಬಿದ್ದಿದೆ. ಅದಲ್ಲದೇ ಸುತ್ತಲೂ ಗುಂಡಿಗಳನ್ನು ತೆಗೆದು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇನ್ನೂ ಕೆಲಸವನ್ನು ಪ್ರಾರಂಭ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಗಮನಕ್ಕೂ ತಂದರೂ ಸಹ ಯಾವುದೇ ಪ್ರಯೋಜನ ಆಗಲಿಲ್ಲ ಅಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಚಿಕ್ಕ ಮುನಿಯಪ್ಪ ಆರೋಪ ಮಾಡುತ್ತಿದ್ದಾರೆ.
ಇನ್ನು ಸರ್ಕಾರದ ವಿಶೇಷ ಅನುದಾನದಲ್ಲಿ 1 ಕೋಟಿ 24 ಲಕ್ಷ ಹಣವನ್ನು ಪ್ರೌಢಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲು ಬಿಡುಗಡೆಯನ್ನು ಮಾಡಿದರು ಅಂತೆ. ಆದರೆ ಅಷ್ಟೊಂದು ಹಣ ಬಿಡುಗಡೆ ಆದ್ರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ ಕ್ಕೂ ಬೇಕಾಬಿಟ್ಟಿ ಕೆಲಸ ಮಾಡಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಇನ್ನು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಬೀದಿಯಲ್ಲಿ ಕೂತು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ ಇನ್ನು ಇದೇ ಶಾಲೆಯಲ್ಲಿ ಓದುತ್ತಿದ್ದ 850 ಮಕ್ಕಳು ಬೇರೆ ಶಾಲೆಯಲ್ಲಿ ಒಂದೇ ಕೊಠಡಿಯಲ್ಲಿ 150ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನ ಒಂದೇ ಜಾಗದಲ್ಲಿ ಕೂರಿಸಿ ಪಾಠ ಮಾಡುವ ಪರಿಸ್ಥಿತಿ ಎದುರಾಗಿದೆ.
ಒಟ್ನಲ್ಲಿ ಸಾಕಷ್ಟು ಹೋರಾಟಗಳ ನಡುವೆ ಸರ್ಕಾರಿ ಶಾಲೆಯನ್ನು ಉಳಿಸಿ-ಬೆಳೆಸಲು ಹೋರಾಟ ಮಾಡಿದ ಊರಿನ ಹಿರಿಯರು ಯಾರಿಗೂ ಉಪಯೋಗ ಬಾರದ ರೀತಿಯಲ್ಲಿ ನೆನಗುದಿಗೆ ಬಿದ್ದಿರುವ ಮಾತ್ರ ವಿಪರ್ಯಾಸವೇ ಸರಿ ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಲಿ ಅನ್ನೋದೆ ನಮ್ಮ ಆಶಯ
ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್, ಬೆಂಗಳೂರು
PublicNext
31/07/2022 06:00 pm