ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ಲೀಸ್..ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸಿಎಂ ತಾತ: ಬಾಲಕಿಯ ಮನವಿ

ಬೆಂಗಳೂರು: 'ಸಿಎಂ ತಾತ..ನಮ್ಮ ಬೆಂಗಳೂರಲ್ಲಿ ರಸ್ತೆಗಳು ಎಲ್ಲ ಕಡೆ ತಗ್ಗು ಬಿದ್ದಿವೆ. ಎಲ್ಲರೂ ಸುರಕ್ಷಿತವಾಗಿ ಮನೆ ಸೇರಬೇಕು ಎಲ್ಲರಿಗೂ ಕುಟುಂಬ ಇದೆ. ದಯವಿಟ್ಟು ರಸ್ತೆಯಲ್ಲಿ ಇರುವ ಗುಂಡಿಗಳನ್ನು ಮುಚ್ಚಿಸಿ ತಾತ..' ಎಂದು ಬಾಲಕಿಯೊಬ್ಬಳು ಸಿಎಂ ಬಸವರಾಜ್ ಬೊಮ್ಮಾಯಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಈ ರೀತಿ ಸಿಎಂ ಗೆ ಮನವಿ ಮಾಡಿದ ಈ ಬಾಲಕಿಯ ಹೆಸರು ಧವನಿ. ಈಕೆ ಬೆಂಗಳೂರಿನ ಹೆಗ್ಗನಹಳ್ಳಿ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾಳೆ. ಇತ್ತೀಚೆಗಷ್ಟೇ ಸಂಭವಿಸಿದ ಅಪಘಾತದಲ್ಲಿ ಧವನಿಯ ತಾಯಿಯ ಕಾಲಿಗೆ ತೀವ್ರ ಪೆಟ್ಟಾಗಿದೆ. ಇದರಿಂದ ಮನನೊಂದಿರುವ ಧವನಿ ವಿಡಿಯೋ ಮೂಲಕ ಸಿಎಂ ಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಮನವಿ ಮಾಡಿದ್ದಾಳೆ. 'ಬೇಕಿದ್ರೆ ಅಪ್ಪ ನೀಡುವ ಚಾಕಲೇಟ್ ಹಣವನ್ನು ನಿಮಗೆ ಕೊಡ್ತೀನಿ ಸಿಎಂ ತಾತ. ನೀವು ದಯವಿಟ್ಟು ರಸ್ತೆ ರಿಪೇರಿ ಮಾಡಿಸಿ ಎಂದು ತನ್ನ ಕಷ್ಟ ಹೇಳಿಕೊಂಡಿದ್ದಾಳೆ.

Edited By : Nagaraj Tulugeri
Kshetra Samachara

Kshetra Samachara

25/10/2021 05:05 pm

Cinque Terre

1.79 K

Cinque Terre

0

ಸಂಬಂಧಿತ ಸುದ್ದಿ