ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ರಾತ್ರಿ ಬೆಳಗಾಗೋದ್ರೊಳಗೆ ಮಾಡ್ಲಿಕ್ ಆಗೋದಿಲ್ಲಾ... ಕಾರ್ಮಿಕ‌ ಸಚಿವ ಹೆಬ್ಬಾರ..‌

ಸಂದರ್ಶನ-- ಪ್ರವೀಣ್ ನಾರಾಯಣ..

ಬೆಂಗಳೂರು-- ಕರ್ನಾಟಕದ ಕಾಶ್ಮೀರ ಅನ್ನುವ ಹೆಗ್ಗಳಿಕೆ ಇರುವ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬೇಕು ಅನ್ನುವುದು ಅಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿದ್ದು ಇದೀಗ ಅದರ ಕೂಗು ತಾರಕಕ್ಕೇರಿದೆ ಅದರಲ್ಲೂ ಈ ಬಾರಿ ಸದನದಲ್ಲಿ ಈ ಕುರಿತು ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಈ ಕುರಿತು ಪ್ರಶ್ನೆಯನ್ನು ಕೇಳಿದಾಗ ಆರ್ಥಿಕ ಇಲಾಖೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂಬ ಉತ್ತರ ಸರ್ಕಾರದಿಂದ ಬಂದ ನಂತರವಂತೂ ಉತ್ತರಕನ್ನಡಿಗರ ಆಕ್ರೋಶ ತಾರಕಕ್ಕೇರಿತ್ತು..

ಆದರೆ ಇದೀಗ ಈ ಕುರಿತು ಆರೋಗ್ಯ ಸಚಿವ ಡಾಸುಧಾಕರ್ ಅವರ ನಿವಾಸದಲ್ಲಿ ಇಂದು ನಡೆದ ಸಭೆಯಲ್ಲಿ ಈ ವಿಚಾರವಾಗಿ ಜೆಲ್ಲೆಯ ಎಲ್ಲಾ ಶಾಸಕರೂ ಒಕ್ಕೋರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದು ಒತ್ತಾಯ ಬಹಳ ಜೋರಾಗೇ ಇದೆ.. ಮುಖ್ಯಮಂತ್ರಿಗಳೂ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ..ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ಜೊತೆ.. ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.

Edited By : Somashekar
PublicNext

PublicNext

20/09/2022 07:08 pm

Cinque Terre

69.22 K

Cinque Terre

2

ಸಂಬಂಧಿತ ಸುದ್ದಿ