ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ವಿಧಾನಸೌಧದಲ್ಲಿ ಇಫ್ತಾರ್ ನಿಷೇಧಿಸಿ, ಹಲಾಲ್ ಬಹಿಷ್ಕರಿಸಿ"; ಸರ್ಕಾರಕ್ಕೆ ತಾಕೀತು

ಬೆಂಗಳೂರು: ಹಲಾಲ್ ಬಹಿಷ್ಕರಿಸಬೇಕು ಹಾಗೂ ವಿಧಾನಸೌಧ- ವಿಕಾಸ ಸೌಧದಲ್ಲಿ ಇಫ್ತಾರ್ ಕೂಟ ನಿಷೇಧಿಸಬೇಕೆಂದು ಫ್ರೀಡಂ ಪಾರ್ಕ್ ನಲ್ಲಿ ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಹಿಂದೂ ಕಾರ್ಯಕರ್ತರ ಸಹಿತ ಪ್ರಶಾಂತ್ ಸಂಬರಗಿ ಹಾಗೂ ಪುನೀತ್ ಕರೆಹಳ್ಳಿ ಮತ್ತವರ ಬೆಂಬಲಿಗರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನಾಕಾರರಿಂದ ಈ ಬಗ್ಗೆ ಸರ್ಕಾರಕ್ಕೆ ಮೂರು ಗಂಟೆಯ ಡೆಡ್ ಲೈನ್ ನೀಡಲಾಗಿದೆ.

ಇಫ್ತಾರ್ ಕೂಟವನ್ನು ವಿಧಾನ ಸೌಧದಲ್ಲಿ ಮಾಡಬಾರದು. ಕಾಂಗ್ರೆಸ್ ನವರು ಹುಟ್ಟು ಹಾಕಿರುವ ಈ ಕೆಟ್ಟ ಸಂಪ್ರದಾಯವನ್ನು ಕಿತ್ತು ಹಾಕಬೇಕು. ವಿಧಾನಸೌಧದಲ್ಲಿ ಹಲಾಲ್ ಆಹಾರ ಸೇವನೆ ಮಾಡಲು ಅವಕಾಶವನ್ನೂ ನೀಡಬಾರದೆಂದು ಈ ಸಂದರ್ಭ ಪ್ರಶಾಂತ್ ಸಂಬರಗಿ ತಿಳಿಸಿದರು.

ಮೂರು ಗಂಟೆಯೊಳಗೆ ಆದೇಶ ನೀಡಲು ಸರ್ಕಾರಕ್ಕೆ ಒತ್ತಾಯಿಸಲಾಗಿದ್ದು, ಇಲ್ಲವಾದಲ್ಲಿ ಮೂರು ಗಂಟೆಯ ಬಳಿಕ ಬೃಹತ್ ಪ್ರತಿಭಟನೆ ಹಮ್ಮಿಕೊಂಡು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.

Edited By :
Kshetra Samachara

Kshetra Samachara

23/04/2022 05:40 pm

Cinque Terre

3.58 K

Cinque Terre

0

ಸಂಬಂಧಿತ ಸುದ್ದಿ