ಬೆಂಗಳೂರು: ದೇಶದಲ್ಲಿ ಪಿಎಫ್ಐ ಸಂಘಟನೆ ಬ್ಯಾನ್ ಬೆನ್ನಲ್ಲೆ ಸಂಘಟನೆ ಬಗ್ಗೆ ಮುಂದಿನ ಕ್ರಮಗಳೇನು? ಉಳಿದ ಕಾರ್ಯಕರ್ತರು, ಮುಖಂಡರ ಕಥೆ ಏನು? ಹೊಸಬರು ಈ ಸಂಘಟನೆಗೆ ಸೇರೋಕೆ ಅವಕಾಶ ಇದ್ಯಾ ಇಲ್ವಾ? ಸೇರಿದ್ರೆ ಅಂತಹವರ ವಿರುದ್ಧ ಆಗುವ ಕ್ರಮಗಳೇನು ಅನ್ನೋ ಬಗ್ಗೆ ಸಂಘದಲ್ಲಿ ಚರ್ಚೆಯಾಗ್ತಿದೆ.
ಈಗಾಗಲೇ ದೇಶಾದ್ಯಂತ ಪಿಎಫ್ಐ ಸಂಘಟನೆಯನ್ನ ಬ್ಯಾನ್ ಮಾಡಿ ಕೇಂದ್ರ ಆದೇಶ ನೀಡಿದ್ದು, ಇನ್ಮೇಲೆ ದೇಶದಲ್ಲಿ ಪಿಎಫ್ಐ ಸಂಘಟನೆ ಹೆಸರೂ ಹೇಳೋಹಾಗಿಲ್ಲ. ಪಿಎಫ್ ಐ ಹೆಸರು ಹೇಳಿದ್ರೇನೆ UAPA ಆ್ಯಕ್ಟ್ ಅಡಿ ಕೇಸ್ ಬೀಳುತ್ತೆ. ಸಂಘಟನೆಯ ಉದ್ದೇಶವೇ ಕಾನೂನು ಬಾಹಿರ ಅನ್ನೋದು ಗೊತ್ತಾಗಿರೋ ಹಿನ್ನೆಲೆ ಸಂಘಟನೆಯನ್ನ ಬ್ಯಾನ್ ಮಾಡಿರೋ ಸರ್ಕಾರ ಈಗಿನಿಂದಲೇ ಯಾರೂ ಪಿಎಫ್ಐ ಹೆಸರು ಬಳಸುವಂತಿಲ್ಲ. ಯಾವ ಹೊಸ ಕಾರ್ಯಕರ್ತರೂ ಈ ಸಂಘಟನೆಗೆ ಸೇರುವಂತಿಲ್ಲ. ಹಾಗೇನಾದ್ರು ಸಂಘಟನೆಗೆ ಸೇರೋ ಪ್ರಯತ್ನ ಮಾಡಿದ್ರೆ ಅವರ ವಿರುದ್ಧ UAPA ನಡಿ ಕೇಸ್ ಹಾಕಿ ತಕ್ಷಣ ಅರೆಸ್ಟ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸಂಘಟನೆಯ ಉಳಿದ ಮುಖಂಡರು ಪಿಎಫ್ಐ ಹೆಸರಲ್ಲಿ ಯಾವುದೇ ಕಾರ್ಯಕ್ರಮ, ಪ್ರತಿಭಟನೆ, ಹಣ ಸಂಗ್ರಹಣೆ ಏನೂ ಮಾಡುವಂತಿಲ್ಲ. ಪಿಎಫ್ಐ ಹೆಸರಲ್ಲಿ ಮನೆಯಲ್ಲಿ ನಾಲ್ಕು ಜನ ಮೀಟಿಂಗ್ ಮಾಡಿದ್ರೂ ಕಾನೂನುಬಾಹಿರ ಆ್ಯಕ್ಟ್ ಅಡಿ ಕೇಸ್ ಬೀಳುವ ಸಾಧ್ಯತೆಯಿದೆ.
PublicNext
28/09/2022 04:05 pm