ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಮಾಡಿ: ಬಿಬಿಎಂಪಿಗೆ ಸಿಎಂ ಖಡಕ್ ಸೂಚನೆ

ಬೆಂಗಳೂರು: ಕಳೆದ 2 ದಿನಗಳ ಹಿಂದೆ ಸಿಎಂ ಮಹದೇವಪುರ ಭೇಟಿ ವೇಳೆ, ರಾಜಕಾಲುವೆ ನೀರು ಉಕ್ಕಿ, ರಸ್ತೆಗಳು ಮೋರಿ‌ ನೀರಿನಿಂದ ಜಲಾವೃತವಾಗಿದ್ದವು. ಇದರಿಂದಾಗಿ ಸಾರ್ವಜನಿಕರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಸಿಎಂ ಬೊಮ್ಮಾಯಿ ಕೂಡ ಜನರ ಆಕ್ರೋಶಕ್ಕೆ ಬೆದರಿ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಖಡಕ್ ಸಂದೇಶ ರವಾನಿಸಿದ್ರು. ಸಿಎಂ ಅದೇಶದ ಬೆನ್ನಲ್ಲೇ ಬಿಬಿಎಂಪಿ ಆಯುಕ್ತರು ವಲಯವಾರು ಜಂಟಿ ಆಯುಕ್ತರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ .

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈಗಾಗಲೇ ಪಾಲಿಕೆಯಿಂದ ಹಲವು ಕಟ್ಟಡಗಳನ್ನು ಗುರುತು ಮಾಡಲಾಗಿದೆ .ಮಹದೇವಪುರ, ಬೊಮ್ಮನಹಳ್ಳಿ, RR ನಗರ, ಬೆಳ್ಳಂದೂರು ಪ್ರದೇಶಗಳಲ್ಲಿ ಹಲವು ರಾಜಕಾಲುವೆಗಳು ಒತ್ತುವರಿಯಾಗಿವೆ .ಕೂಡಲೇ ಒತ್ತುವರಿ ತೆರವು ಮಾಡಲು ಸ್ಥಳೀಯ ಜಂಟಿ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ತೆರವು ಮಾಡ್ತೇವೆಂಬುದಾಗಿ ಹೇಳಿದ್ದಾರೆ.

ಕೆಲವು ಕಡೆ ದೊಡ್ಡ ಗಾತ್ರದ ರಾಜಕಾಲುವೆಗಳನ್ನು ಒತ್ತುವರಿ ಮಾಡಿ ಚಿಕ್ಕದಾಗಿ ಮಾಡಿದ್ದಾರೆ. ಅವುಗಳನ್ನು ಸಹ ತೆರವು ಮಾಡ್ತೇವೆ. ಈ ಹಿಂದೆ ಬೊಮ್ಮನಹಳ್ಳಿ, RR ನಗರ,ಮಹದೇವಪುರದಲ್ಲಿ CMC ಇದ್ದಾಗ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ. ಅವುಗಳನ್ನು ತೆರವು ಮಾಡ್ತೇವೆ‌ ಎಂದು ಹೇಳಿದ್ದಾರೆ.

ಇನ್ನು ಪಾಲಿಕೆ ವ್ಯಾಪ್ತಿಯ ವಲಯವಾರು ಒತ್ತುವರಿ ವಿವರ ನೋಡುವುದಾದ್ರೆ

• ಪೂರ್ವ - 110

• ಪಶ್ಚಿಮ - 59

• ದಕ್ಷಿಣ - 20

• ಕೋರಮಂಗಲ ಕಣಿವೆ& ಯಲಹಂಕ - 96

• ಮಹದೇವಪುರ - 175

• ಬೊಮ್ಮನಹಳ್ಳಿ - 86

• ಆರ್.ಆರ್.ನಗರ - 9

• ದಾಸರಹಳ್ಳಿ - 126

• ಒಟ್ಟು = 696 ಒತ್ತುವರಿಗಳು ತೆರವಿಗೆ ಬಾಕಿದೆ.

Edited By : Somashekar
PublicNext

PublicNext

03/09/2022 01:48 pm

Cinque Terre

29.95 K

Cinque Terre

2

ಸಂಬಂಧಿತ ಸುದ್ದಿ