ಬೆಂಗಳೂರು:ಕೆಂಪೇಗೌಡ ಬಡಾವಣೆಯ ಮೂಲ ಸೌಕರ್ಯ ಕಾಮಗಾರಿ ಪ್ರಗತಿ ಹಾಗೂ ಹೆಚ್ಚುವರಿ ಹಣಕಾಸಿನ ಬಳಕೆ ಕುರಿತಂತೆ ಪರಿಶೀಲನೆಗಾಗಿ ನೇಮಿಸಿದ್ದ ಬ್ಯೂರೋ ವೆರಿಟಾಸ್ ಎಂಬ ಮೂರನೇ ಸಂಸ್ಥೆ ತನ್ನ ಕಾರ್ಯದಿಂದ ಹಿಂದೆ ಸರಿದಿದೆ.
ಆ ಹಿನ್ನೆಲೆಯಲ್ಲಿ ಅದೇ ಜಾಗಕ್ಕೆ ಆಲ್ಕನ್ ಎಂಬ ಸಂಸ್ಥೆ ಬಿಡಿಎ ನೇಮಕ ಮಾಡಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಕ ಸೌಕರ್ಯ ಕಲ್ಪಿಸಲು ಅಂದಾಜು 2,600 ಕೋಟಿ ರೂ ವೆಚ್ಚ ಮಾಡಲು ಅಂದಾಜಿ ಸಲಾಗಿತ್ತು.
ಪ್ರಸ್ತುತ ಕೇವಲ 50% ರಷ್ಟು ಕಾಮಗಾರಿ ಮಾತ್ರ ಪೂರ್ಣವಾಗಿದೆ. ಇನ್ನುಳಿದ ಕಾಮಗಾರಿ ಬಾಕಿ ಉಳಿದಿದ್ದು, 1,600 ಕೋಟಿಗೂ ಅಧಿಕ ವಿವಿಧ ಕಾಮಗಾರಿಗೆ ಖರ್ಚು ಮಾಡಲಾಗಿದೆ.
ಇದೀಗ ಬಾಕಿ ಉಳಿದ ಮೂಲ ಕಾಮಗಾರಿ ನಿರ್ವಹಿಸಲು ಹೆಚ್ಚುವರಿಯಾಗಿ 600 ಕೋಟಿ ಬೇಕಿದೆ. ಹೀಗಾಗಿ ಹೊಸದಾಗಿ ಬಂದ ಸಂಸ್ಥೆ 600 ಕೋಟಿ ಬಿಡುಗಡೆ ಮಾಡಿದ್ರೆ, ಬಾಕಿ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಈ ಸಂಬಂಧ ಸದ್ಯ ತಾತ್ಕಾಲಿಕವಾಗಿ ಲೇಔಟ್‌ನಲ್ಲಿ ಕಾಮಗಾರಿ ಸ್ಥಗಿತ ಮಾಡಲಾಗಿದೆ.
ಇನ್ನೂ ಕಾಮಗಾರಿ ಪ್ರಗತಿ ಪರಿಶೀಲನೆ ವರದಿ ಸಲ್ಲಿಕೆಗೆ 9 ಕೋಟಿಯನ್ನು ವೆರಿಟಾಸ್ ಸಂಸ್ಥೆ ಕೇಳಿತ್ತು. ಆದರೆ ಆಲ್‌ಕನ್ ಸಂಸ್ಥೆ ಮಾತ್ರ ಕೇವಲ 1.35 ಕೋಟಿಗೆ ವರದಿ ಸಲ್ಲಿಕೆ ಮಾಡಿದೆ ಎಂದು ತಿಳಿದು ಬಂದಿದೆ.
ವರದಿ- ಗಣೇಶ್ ಹೆಗಡೆ
Kshetra Samachara
20/06/2022 03:31 pm