ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಶಕದಿಂದ ತುಕ್ಕು ಹಿಡಿಯುತ್ತಿದೆ 20 ಕೋಟಿ ರೂ. ವೆಚ್ಚದ ಜಕ್ಕೂರು ರೈಲ್ವೆ ಮೇಲ್ಸೇತುವೆ

ಯಲಹಂಕ: 2012ರಲ್ಲಿ ರೈಲ್ವೆ ಇಲಾಖೆ ಮತ್ತು ಬಿಬಿಎಂಪಿಯ ಸಹಭಾಗಿತ್ವದಲ್ಲಿ ಜಕ್ಕೂರು ಜನತೆಗೆ ಅನುಕೂಲವಾಗಲಿ ಅಂತ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಯ್ತು. ಸುಮಾರು ಹದಿನೆಂಟೂವರೆ ಕೋಟಿ ವೆಚ್ಚದ ಕಾಮಗಾರಿ ಕೆಲವು ದಿನ ನಡೆದು ಸದ್ಯ ಸ್ಥಳೀಯ ಜನತೆ ಮತ್ತು ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದ ನಿಂತು ಹೋಗಿದೆ. ಪರಿಣಾಮ ಕೋಟ್ಯಾಂತರ ರೂಪಾಯಿ ಕಾಮಗಾರಿ ಅರ್ಧಕ್ಕೆ ನಿಂತು ಜನ ಸುತ್ತಾಡಿ- ಪರದಾಡುತ್ತಿದ್ದಾರೆ. ಯಲಹಂಕದಿಂದ ನೇರವಾಗಿ ಜಕ್ಕೂರು, ಮಾರ್ಗವಾಗಿ ಸಂಪಿಗೇಹಳ್ಳಿ, ಅಮೃತಹಳ್ಳಿ, ದಾಸರಹಳ್ಳಿ, ಶಿವರಾಮಕಾರಂತ ಬಡಾವಣೆಗಳಗೆ ಹೋಗಲಾರದೆ ಬಳಸಿಕೊಂಡು ಹತ್ತಾರು ಕಿ.ಮೀ. ಸುತ್ತಾಡಿ- ಪರದಾಡುವಂತಾಗಿದೆ.

ಒಟ್ಟು 400 ಮೀಟರ್‌ನಲ್ಲಿ 200 ಮೀ. ರೈಲ್ವೆ ಇಲಾಖೆಗೆ ಸೇರಿದರೆ ಉಳಿದ 200 ಮೀ. ಮೇಲ್ಸೇತುವೆಯ ಸಂಪರ್ಕ ರಸ್ತೆಗೆ ಬಿಬಿಎಂಪಿ ಅಭಿವೃದ್ಧಿಪಡಿಸುತ್ತದೆ. ಜಕ್ಕೂರು ರಸ್ತೆ ಮತ್ತು ಯಲಹಂಕ ರಸ್ತೆ ಅಭಿವೃದ್ಧಿಗೆ ಉಳಿದ 400 ಮೀ ಜಮೀನು ಬೇಕಾಗಿದ್ದು, ಈ ಪ್ರದೇಶ ಈಗ ಸಮಸ್ಯೆಯ ಹುತ್ತವಾಗಿದೆ. ಒಟ್ಟು ಭೂಸ್ವಾಧೀನಕ್ಕೆ ನಿಗದಿ ಪಡಿಸಿದ್ದು 48 ಆಸ್ತಿಗಳನ್ನು. ಇವುಗಳಲ್ಲಿ 38 ಆಸ್ತಿ ಯಾವುದೇ ಸಮಸ್ತೆಯಿಲ್ಲದೆ ಅಡಿಗೆ 4400 ರೂಪಾಯಿಯಂತೆ ಪರಿಹಾರ ಪಡೆದುಕೊಂಡಿದ್ದಾರೆ. ಇದರಲ್ಲಿ ಉಳಿದ 10 ಆಸ್ತಿಗಳಲ್ಲಿ ರಸ್ತೆ ಸಂಪರ್ಕ ಜಾಗಕ್ಕಾಗಿ ಮಾತುಕತೆ ನಡೆಸಿದ್ದರು. ನಾಲ್ಕು ಜನ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಿಂದ ಸಮಸ್ಯೆ ಪರಿಹಾರವಾಗದೆ ಕಾಮಗಾರಿ ಅರ್ಧಕ್ಕೆ ನಿಂತು ಜಕ್ಕೂರು ಮತ್ತು ಸುತ್ತಮುತ್ತಲ ಹತ್ತಾರು ಹಳ್ಳಿಗಳ ಸಾವಿರಾರು ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ನಾಲ್ಕುಪಥ ಮೇಲ್ಸೇತುವೆಯ ಮೊದಲ ಹಂತವಾಗಿ 38 ಆಸ್ತಿಗಳ ಸಹಾಯದಿಂದ ಎರಡು ಪಥ ಮೇಲ್ಸೇತುವೆ ಕಾಮಗಾರಿ ಮುಗಿಸಬಹುದಿತ್ತು. ಆದರೆ ರೈಲ್ವೆ ಇಲಾಖೆ ಇದಕ್ಕೆ ಒಪ್ಪುತ್ತಿಲ್ಲ. ಸ್ಥಳೀಯ ಶಾಸಕ ಕೃಷ್ಣಭೈರೇಗೌಡ, ಸಂಸದ ಸದಾನಂದಗೌಡ, ಜಕ್ಕೂರು ಮತ್ತು ಕೋಗಿಲು ವಾರ್ಡ್ ಬಿಬಿಎಂಪಿ ಸದಸ್ಯರು, ಸ್ಥಳೀಯ ಜನರನ್ನು ಕರೆಸಿ ಮಾತುಕತೆ ನಡೆಸಿದರು ಯಾವುದೇ ಪ್ರಯೋಜನ ಆಗ್ತಿಲ್ಲ. ಏನೇ ಆಗಲಿ ಸ್ಥಳೀಯ ಜನ, ಅಧಿಕಾರಿಗಳು ಮನಸ್ಸು ಮಾಇ ಮೇಲ್ಸೇತುವೆ ಆದಷ್ಟು ಬೇಗ ಜನ ಬಳಕೆಗೆ ಸಿಗುವಂತಾಗಲಿ..

Edited By :
Kshetra Samachara

Kshetra Samachara

11/05/2022 06:52 pm

Cinque Terre

36.52 K

Cinque Terre

0

ಸಂಬಂಧಿತ ಸುದ್ದಿ