ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಗೆ ಮತ್ತೆ ಮತ್ತೆ ಉದ್ಘಾಟನೆಯ ಭಾಗ್ಯ ಸಿಗುತ್ತಿದೆ. ಒಮ್ಮೆ ಪೌರಕಾರ್ಮಿಕರಿಂದ ಉದ್ಘಾಟನೆ ಮಾಡಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಂದ ಮತ್ತೆ ಉದ್ಘಾಟನೆ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮವನ್ನ ಬಹಿಷ್ಕರಿಸಿ ಹೊರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸರ್ಕಾರದಿಂದ ಪೌರಕಾರ್ಮಿಕರಿಗೆ ಮಾಡಿದ ಅವಮಾನವೆಂದು ಪ್ರತಿಭಟನೆ ನಡೆಸಿದರು.
ದೊಡ್ಡಬಳ್ಳಾಪುರ ನಗರಸಭೆಯ ಕಾರ್ಯಾಲಯ ಕಟ್ಟಡದ ಕಾಮಾಗಾರಿ ಪೂರ್ಣಗೊಂಡು ವರ್ಷಗಳೇ ಕಳೆದ್ರು ಉದ್ಘಾಟನೆ ಭಾಗ್ಯ ಕಂಡಿರಲಿಲ್ಲ. 4 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವ್ಯ ಕಟ್ಟಡ ಉದ್ಘಾಟನೆಗೆ ನೂರೊಂದು ವಿಘ್ನ, ಸತತ 5 ಬಾರಿ ಕಟ್ಟಡ ಉದ್ಘಾಟನೆಗೆ ದಿನಾಂಕ ನಿಗದಿಮಾಡಲಾಗಿತ್ತು. ಒಮ್ಮೆ ಕೋವಿಡ್, ಮತ್ತೊಮ್ಮೆ ಚುನಾವಣೆ ನೀತಿ ಸಂಹಿತೆ, ಮಗದೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. 4 ನೇ ಬಾರಿ ಸಚಿವರ ಗೈರು ಹಾಜರಿಯಿಂದ ಪೌರಕಾರ್ಮಿಕರಿಂದ ಉದ್ಘಾಟನೆಯನ್ನ ಕಾಂಗ್ರೆಸ್ ಶಾಸಕ ಟಿ ವೆಂಕಟರಮಣಯ್ಯ ಮಾಡಿಸಿದ್ರು.
ಇಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆಗೊಂಡ ನಗರಸಭೆ ಕಟ್ಟಡ ಸಾರ್ವಜನಿಕ ಸೇವೆಗೆ ಸಿದ್ದವಾಗಿದೆ.
ಪೌರಕಾರ್ಮಿಕರಿಂದ ಉದ್ಘಾಟನೆಯಾದರು ಮತ್ತೊಮ್ಮೆ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ರವರಿಂದ ಉದ್ಘಾಟನೆ ಮಾಡಿಸಿದ್ದು ಪೌರಕಾರ್ಮಿಕರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ನಗರಸಭೆಯ ಸದಸ್ಯರು ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದರು, ಕಾರ್ಯಕ್ರಮ ಹೊರಗಡೆ ನಿಂತು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪ್ರತಿಭಟನೆ ಮತ್ತು ಪೌರಕಾರ್ಮಿಕರಿಗೆ ಮಾಡಿದ ಅವಮಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಇಂದು ಅಧಿಕೃತವಾಗಿ ನಗರಸಭೆಯ ಉದ್ಘಾಟನೆಯಾಗಿದೆ. ಪೌರಾಡಳಿತ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ನಾವು ಸರ್ಕಾರದ ಭಾಗವಾಗಿ ಉದ್ಘಾಟನೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಇದು ಒಳ್ಳೆಯ ಬೆಳವಣಿಗೆಯಲ್ಲ ಅಂದರು.
ಒಂದೆಡೆ ಸರ್ಕಾರ ಪೌರಕಾರ್ಮಿಕರಿಗೆ ಅವಮಾನ ಮಾಡಿದ್ರೆ, ಮತ್ತೊಂದೆಡೆ ನಗರಸಭೆ ಸಿಬ್ಬಂದಿ ಪೌರಕಾರ್ಮಿಕರಿಗೆ ಅವಮಾನ ಮಾಡಿದೆ. ಕಟ್ಟಡ ಸ್ವಚ್ಛತೆಗಾಗಿ ಕಳೆದೊಂದು ವಾರದಿಂದ ಪೌರಕಾರ್ಮಿಕರನ್ನ ದುಡಿಸಿಕೊಂಡ ನಗರಸಭೆಯವರು ಇಂದು ಊಟದ ವಿಚಾರದಲ್ಲಿ ತಾರತಮ್ಯ ಮಾಡಿದೆ. ಪೌರಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನ ನೀಡಿದ್ದಾರೆ. ನಗರಸಭೆ ಸಿಬ್ಬಂದಿಗೆ ಹೊಳಿಗೆ ಊಟದ ವ್ಯವಸ್ಥೆ ಮಾಡಿದೆ ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ನಗರದ ಸ್ವಚ್ಛತೆಯನ್ನ ಕಾಪಾಡುವ ಪೌರಕಾರ್ಮಿಕರಿಂದ ಇಂದು ನಗರ ಸುಂದರ ನಗರವಾಗಿ ಕಾಣಿಸುತ್ತದೆ. ಆದರೆ ಆ ಕೃತಜ್ಞತೆ ಸರ್ಕಾರಕ್ಕೂ ಇಲ್ಲ. ನಗರಸಭೆ ಸಿಬ್ಬಂದಿಗೂ ಇಲ್ಲದಿರುವುದು ದುರ್ದೈವದ ಸಂಗತಿ
Kshetra Samachara
27/04/2022 03:57 pm