ಸ್ವಚ್ಛ ಭಾರತ ಅಭಿಯಾನದಡಿ ನಾವು ಪ್ರತೀ ಗ್ರಾಮೀಣ ಪ್ರದೇಶದ ಪ್ರತೀ ಮನೆಮನೆಗೂ ಶೌಚಾಲಯ ನಿರ್ಮಿಸಿಕೊಟ್ಟಿದ್ದೇವೆ. ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಧನ ಸಹಾಯವೂ ಒದಗಿಸಲಾಗಿದೆ. ಆದರೆ ಬಹಳಷ್ಟು ಜನರಿಗೆ ಗುಂಪು ಗುಂಪಾಗಿ ಬಯಲು ಕಡೆ ಶೌಚಾಲಯಕ್ಕೆ ಹೋಗುವುದೇ ಬಲು ಇಷ್ಟ. ಅಲ್ಲಿ ಒಟ್ಟಾಗಿ ಸೇರಿ ಮನೆ ಮನೆ ವಿಚಾರಗಳನ್ನು ಮಾತಾಡುವ ಕಾರಣಕ್ಕೆ ಅಲ್ಲಿಗೆ ಹೋಗ್ತಾರೆ ಅಂತ ಸಚಿವ ಕೆ. ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಜನರ ಮನಃಸ್ಥಿತಿ ಬದಲಾಗದ ಹೊರತು ಯಾವ ಯೋಜನೆಗಳೂ ಸಫಲವಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವ್ರು,. ಮೋದಿ ಮನೆ ಮನೆಗೆ ಗಂಗೆ ಯೋಜನೆ ಜಾರಿಗೆ ತಂದಿದ್ದಾರೆ..ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ಬಂದಿದೆ. 2020ರಲ್ಲಿ ಜಲ ಜೀವನ್ ಮಿಷನ್ ಯೋಜನೆ ಆರಂಭ ಆಗಿತ್ತು. 3 ಸಾವಿರ ಗ್ರಾಮಕ್ಕೆ ಕೊಳವೆ ಮೂಲಕ ನೀರು ಒದಗಿಸಲಾಗಿದೆ. ರಾಜ್ಯದ 25% ಮನೆಗಳಿಗೆ ಈ ಯೋಜನೆ ಇತ್ತು. ಇದೀಗ ರಾಜ್ಯದ 46% ರಷ್ಟು ಮನೆಗೆ ಈ ಯೋಜನೆ ತಲುಪಿದೆ ಅಂದ್ರು.
ಒಂದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಯೋಜನೆ ಮುಗಿಯುತ್ತೆ. ನರೇಗಾ ಯೋಜನೆ ಅನುಷ್ಠಾನದಲ್ಲಿ ದಾಖಲೆ ಮಾಡಿದ್ದೇವೆ. 13 ಕೋಟಿ ಕೊಟ್ಟಿದ್ದನ್ನು ನಾವು ಸಂಪೂರ್ಣವಾಗಿ ಯೋಜನೆಯಲ್ಲಿ ಬಳಸಿಕೊಂಡಿದ್ದೇವೆ. ಕೇಂದ್ರದ ನಿರೀಕ್ಷೆ ಮೀರಿ ಸಾಧನೆ ಮಾಡಿದ್ದೇವೆ ಎಂದು ಈಶ್ವರಪ್ಪ ತಿಳಿಸಿದ್ರು.
PublicNext
09/04/2022 06:38 pm