ಬೆಂಗಳೂರು: ಒಂದು ಕಡೆ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದದ ಕೇಂದ್ರ ಬಿಂದುವಾಗಿದ್ದು,ಬಾಬ್ರಿ ಮಸೀದಿ ರೀತಿ ಈದ್ಗಾ ಮೈದಾನದಲ್ಲಿನ ಗೋಡೆ ಕೆಡುವುದಾಗಿ ಹೇಳಿಕೆ ನೀಡಿದ್ದ ಹಿಂದೂ ಕಾರ್ಯಕರ್ತ ಭಾಸ್ಕರನ್ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಹಿನ್ನಲೆ ಭಾಸ್ಕರನ್ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು,ಕಳೆದ ಒಂದು ವರ್ಷದಿಂದ ಈದ್ಗಾ ಮೈದಾನದ ವಾರಸುದಾರಿಕೆ ವಿಚಾರ ಚರ್ಚೆಯಲ್ಲಿತ್ತು.
ಹಿಂದೂಪರ ಸಂಘಟನೆ, ಬಿಬಿಎಂಪಿ ಹಾಗೂ ವಕ್ಪ್ ಬೋರ್ಡ್ ನಡುವೆ ಸಂಘರ್ಷ ನಡೆಯುತ್ತಿದ್ದ ಬೆನ್ನಲ್ಲೆ,ಸದ್ಯ ಈದ್ಗಾ ಮೈದಾನ ಕಂದಾಯ ಇಲಾಖೆ ಸ್ವತ್ತಾಗಿದೆ.
ಎಲ್ಲರೂ ಆಟದ ಮೈದಾನ ಬಳಸಿಕೊಳ್ಳಬೇಕು ಹೀಗಾಗಿ ಡಿಸೆಂಬರ್ 6 ರೊಳಗೆ ಈದ್ಗಾ ಮೈದಾನದ ಗೋಡೆ ಕೆಡವಬೇಕು ನಾವು ಸರ್ಕಾರಕ್ಕೆ ಗಡುವು ನೀಡುತ್ತಿದ್ದೇವೆ.
ಈಗಾಗಲೇ ನಾವು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ತಯಾರಿ ನಡೆಸಿದ್ದೇವೆ. ಕರ್ನಾಟಕ ರಾಜ್ಯ ಆಂದ್ರಪ್ರದೇಶ, ತೆಲಂಗಾಣ,ತಮಿಳುನಾಡು,ಕೇರಳ , ಮಹಾರಾಷ್ಟ್ರದ ಹಿಂದೂಪರ ಸಂಘಟನೆಗಳ ಜೊತೆ ಟಚ್ ನಲ್ಲಿ ಇದ್ದೇವೆ ಎಂದು ಭಾಸ್ಕರನ್ ಹೇಳಿಕೆ ನೀಡಿದ್ರು.
ಭಾಸ್ಕರನ್ ಹೇಳಿಕೆಯಿಂದ ಕೋಮು ಸೌಹರ್ಧತೆಗೆ ಧಕ್ಕೆಯಾಗಲಿದೆ. ಅನ್ಯ ಧರ್ಮೀಯರು ಪೂಜಿಸುವ ಜಾಗದ ಬಗ್ಗೆ ಅವಮಾನಿಸಿ ಮಾತನಾಡಿದ್ದಾರೆ ಇದು ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತ ಹೇಳಿಕೆ, ಅಲ್ಲದೇ ಡಿಸೆಂಬರ್ 6 ಡೇಟ್ ಬರೆದಿಟ್ಟುಕೊಳ್ಳಿ ಈದ್ಗಾ ಮೈದಾನ ಗೋಡೆ ನೆಲಸಮ ಆಗುವುದು ಖಚಿತ ಎನ್ನುವ ಹೇಳಿಕೆ ಆಧರಿಸಿ ಪೊಲೀಸ್ರು ಸುಮೋಟೊ ಕೇಸ್ ದಾಖಲಿಸಿದ್ದಾರೆ.
PublicNext
10/08/2022 12:13 pm