ಜುಲೈ16 ಅಭಿಮಾನಿಗಳ ಆರಾಧ್ಯದೈವ,ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಮಹಾಲಕ್ಷ್ಮೀ ಪುರಂ ವಿಧಾನಸಭಾ ಕ್ಷೇತ್ರದ ಹೊಸವಾಡ್೯ 55 ಕ್ಕೆ ನಾಮಕರಣ ಮಾಡಿರುವುದು ಆ ಭಾಗದ ನಾಗರೀಕರಲ್ಲಿ ಸಂತಸದ ಭಾವನೆಯನ್ನು ಮೂಡಿಸಿದೆ.
ಇಡೀ ಬೆಂಗಳೂರಿನ 243 ವಾಡ್೯ ಗಳ ಪೈಕಿ ನಮ್ಮ ಕ್ಷೇತ್ರದ ವಾಡ್೯ ಗೆ ಈ ಹೆಸರು ಒದಗಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಆ ಭಾಗದ ನಾಗರೀಕರು ಹೇಳಿಕೊಂಡಿದ್ದಾರೆ. ಹಾಗಂತ ಈ ಅವಕಾಶ ಸುಮ್ಮನೆ ಸಿಕ್ಕಿದ್ದಲ್ಲ.. ಇದರ ಹಿಂದೆ ಹಲವರ ಪರಿಶ್ರಮ ಇದೆ. ಹೋರಾಟ ಇದೆ.ಒತ್ತಾಸೆ ಇದೆ.. ಹಾಗೆ ನೋಡಿದರೆ ಇಂಥದ್ದೊಂದು ಪರಿಕಲ್ಪನೆ ಇಟ್ಟುಕೊಂಡು ಅದನ್ನ ಸಂಕಲ್ಪವಾಗಿಸಿ ಮೊಟ್ಟಮೊದಲ ಬಾರಿಗೆ ಕಾರ್ಯರೂಪಕ್ಕೆ ಇಳಿದಿದ್ದು ಕುರುಬರಹಳ್ಳಿಯ ಸುಪ್ರಸಿದ್ಧ ಚಾಲುಕ್ಯ ಡಾ ರಾಜ್‌ಕುಮಾರ್ ಟ್ರಸ್ಟ್.!
ಕುರುಬರ ಹಳ್ಳಿ ಅಂದ್ರೆ ಅದು ಕನ್ನಡದ ಗಂಡುಮೆಟ್ಟಿನ ನೆಲ ಅಂತ ಹೆಸರುವಾಸಿಯಾಗಿರುವಂಥದ್ದು. ಅದರಲ್ಲೂ ಚಾಲುಕ್ಯ ಡಾ ರಾಜ್ ಟ್ರಸ್ಟ್ ನವರಂತೂ ಒಂದು ಅಧ್ಬುತವನ್ನೇ ಇಲ್ಲಿ ನಿರ್ಮಿಸಿ ಬಿಟ್ಟಿದ್ದಾರೆ.. ಇಡೀ ಕರುನಾಡಿನಲ್ಲಿ ಹಂಪಿ ಯಲ್ಲಿ ಬಿಟ್ಟರೆ ಅದೇ ಮಾದರಿಯ ಕಲ್ಲಿನ ರಥ ಎಲ್ಲಾದ್ರೂ ಇದೆ ಅಂತಾದ್ರೆ ಅದು ಬೆಂಗಳೂರಿನ ಕುರುಬರ ಹಳ್ಳಿಯಲ್ಲಿ.. ಉತ್ಕೃಷ್ಟ ಶಿಲ್ಪಕಲೆಯ ಸಾಕಾರ ಸ್ವರೂಪದಂತಿರುವ ಕಲ್ಲಿನ ರಥದ ಮೇಲೆ ವಿರಾಜ ಮಾನ ರಾಗಿರುವವರು ಕನ್ನಡಕುಲಕೋಟಿಯ ಹೃದಯಸಿಂಹಾಸನಾಧೀಶ ಡಾ ರಾಜ್ ಕುಮಾರ್ ಅವರು.. ಕನ್ನಡ ಮೊದಲ ರಾಜ ಕದಂಬ ಮಯೂರವರ್ಮ ರ ರೂಪದಲ್ಲಿರುವ ಡಾ ರಾಜ್ ಕುಮಾರ್ ಕಂಚಿನ ಪ್ರತಿಮೆಯನ್ನ 'ನಭೂತೋ ಭವಿಷ್ಯತಿ' ಎಂಬಂತೆ ಇಲ್ಲಿ ಪ್ರತಿಷ್ಟಾಪಿಸಿದವರು ಚಾಲುಕ್ಯ ಡಾ ರಾಜ್ ಕುಮಾರ್ ಟ್ರಸ್ಟ್ ನವರು.
ಅಣ್ಣಾವ್ರ ಹೆಸರಲ್ಲಿ ವರ್ಷಪೂರ್ತಿ ಸಮಾಜಮುಖೀ ಕಾರ್ಯವನ್ನು ಮಾಡುವ ಟ್ರಸ್ಟ್ ನವರು 2-3 ವರ್ಷಗಳಿಗೊಮ್ಮೆ ನಡೆಸುವ ರಾಜ್ ರಥ ಉತ್ಸವ ಇಡೀ ರಾಜ್ಯದಲ್ಲೇ ಅಭೂತ ಪೂರ್ವ ಉತ್ಸವ.. ಹೀಗೆ ಹಲವು ಅಚ್ಚಳಿಯದ ಕನ್ನಡದ ಕಾರ್ಯವನ್ನು ಮಾಡಿರುವ ಚಾಲುಕ್ಯ ಡಾ ರಾಜ್ ಕುಮಾರ್ ಟ್ರಸ್ಟ್ ನವರು.. ತಮ್ಮ ಪ್ರದೇಶದ ವಾಡ್೯ ಒಂದಕ್ಕೆ ಡಾ ಪುನೀತ್ ಹೆಸರನ್ನು ಇಡಬೇಕು ಎಂದು ಒಂದು ಅಭಿಯಾನವನ್ನೇ ಆರಂಭಿಸಿದರು. ಅನೇಕ ಕನ್ನಡ ಪರ ಸಂಘಟನೆಗಳು ಇವರ ಜೊತೆ ಕೈಜೋಡಿಸಿದವು. ಈ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರೂ ಅಬಕಾರಿ ಸಚಿವರೂ ಆದ ಕೆ.ಗೋಪಾಲಯ್ಯನವರಿಗೆ ಚಾಲುಕ್ಯ ಡಾ ರಾಜ್ ಕುಮಾರ್ ಟ್ರಸ್ಟ್ ನವರು ಮನವಿಯನ್ನು ಅರ್ಪಿಸಿ ಅಪ್ಪು ಹೆಸರನ್ನು ಇಡಲೇ ಬೇಕು ಎಂದು ಒತ್ತಾಯಿಸಿದರು. ಗೋಪಾಲಯ್ಯನವರ ಬಾಯಿಂದ ಆ ದಿವಸವೇ ಪುನೀತ್ ವಾಡ್೯ ಎಂದು ಘೋಷಿಸುವಂತೆಯೂ ಮಾಡಿದರು.
ಅದೆಲ್ಲದರ ಪರಿಣಾಮವಾಗಿ ಡಾ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು 55 ನೇ ವಾಡ್೯ಗೆ ನಾಮಕರಣ ಮಾಡಿ ಸರ್ಕಾರ ಗೆಜೆಟ್ ನೊಟಿಫಿಕೇಶನ್ ಹೊರಡಿಸಿದೆ.. ಇದಕ್ಕಾಗಿ ಚಾಲುಕ್ಯ ಟ್ರಸ್ಟ್ ನವರು ಸಚಿವ ಗೋಪಾಲಯ್ಯನವರಿಗೂ ಸಿ.ಎಂ.ಬಸವರಾಜ ಬೊಮ್ಮಾಯಿಯವರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.. ಭಾನುವಾರ ಮಹಾಲಕ್ಷ್ಮೀಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಗಮಿಸಲಿದ್ದು, ಆ ಸಮಾರಂಭದಲ್ಲಿ ಪುನಿತ್ ವಾಡ್೯ನ ಹೆಸರನ್ನು ವಿದ್ಯುಕ್ತವಾಗಿ ಉದ್ಘೋಷಿಸಲಿದ್ದಾರೆ.
ವರದಿ- ಪ್ರವಿಣ್ ರಾವ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
16/07/2022 09:19 pm