ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನ ಮರೆತು ಬಿಟ್ಟಿತಾ ಸರ್ಕಾರ?

ಪಬ್ಲಿಕ್‌ ನೆಕ್ಸ್ಟ್ ವಿಶೇಷ: ಶ್ರೀನಿವಾಸ್ ಚಂದ್ರ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

ರಾಮನಗರ: ದೇಶದೆಲ್ಲೆಡೆ ಅಮೃತ ಸ್ವಾತಂತ್ರ್ಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾವೆಲ್ಲ ಇಂದು ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ ಸಂಭ್ರಮದಲ್ಲಿದ್ದೇವೆ. ಆದರೆ ಈ ಸ್ವಾತಂತ್ರ್ಯಕ್ಕಾಗಿ ಅದೆಷ್ಟು ಜೀವ ಬಲಿಯಾಗಿದ್ಯೋ, ಅದೆಷ್ಟು ಜನ ಕತ್ತಲು ಕೋಣೆಯ ನರಕ‌ ಅನುಭವಿಸಿದ್ರೋ ಲೆಕ್ಕವಿಲ್ಲ. ಅಂತಹ ಒಬ್ಬ ಧೀಮಂತ ಸ್ವಾತಂತ್ರ್ಯ ಹೋರಾಟಗಾರನ ದಾರುಣ ಚಿತ್ರಣವನ್ನ ಪಬ್ಲಿಕ್ ನೆಕ್ಸ್ಟ್ ನಿಮ್ಮ ಮುಂದಿಡುತ್ತಿದೆ.

ಸ್ವಾತಂತ್ರ್ಯ ಹೋರಾಟಗಾರರು ಹಾಗೇ, ಹೀಗೆ ಅವರಿಗೆ ಗೌರವ ಸೂಚಿಸಬೇಕು ಅವರ ಚರಿತ್ರೆ ನಮ್ಮ‌ ಮಕ್ಕಳ ಆದರ್ಶವಾಗಬೇಕು ಅಂತ ಭಾಷಣ ಮಾಡೋ ರಾಜಕಾರಣಿಗಳು ಒಮ್ಮೆ ಇತ್ತ ಗಮನ ಹರಿಸಬೇಕು. ನಾವು ತೋರಿಸ್ತಿರೋ ಈ ಚಿತ್ರಣ ಯಾವುದೋ ಪಾಳು ಬಿದ್ದ ಬಂಗಲೆಯಲ್ಲ.‌ ದಶಕಗಳ ಕಾಲ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಜೈಲು ಸೇರಿದ್ದ ಒಬ್ಬ ಸ್ವಾತಂತ್ರ್ಯ ಸೇನಾನಿ ಬಾಳಿ ಬದುಕಿದ ಮನೆ.

ಎಸ್ ಅವರೇ ಟಿ.ಡಿ ಮಾರಣ್ಣ, ತಟ್ಟೆಕೆರೆ ದಾಸಪ್ಪ ಮಾರಣ್ಣ 1916ರಲ್ಲಿ ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಬಳಿಯ ತಟ್ಟೆಕೆರೆ ಗ್ರಾಮದಲ್ಲಿ ಜನಿಸಿದ್ದರು. 1935ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ಮಾರಣ್ಣ ಕಾಂಗ್ರೆಸ್ ಸೇರಿ, ಧ್ವಜ ಸತ್ಯಾಗ್ರಹ, ಹ್ಯಾಮಿಲ್ಟನ್ ಬಿಲ್ಡಿಂಗ್ ಸತ್ಯಾಗ್ರಹ ಸೇರಿ ಹಲವು ಹೋರಾಟ ನಡೆಸಿದರು. 1935ರಲ್ಲಿ ಬ್ರಿಟಿಷರ ಬೂಟಿನೇಟಿಗೆ ಸಿಲುಕಿ ಜೈಲು ಕೂಡ ಸೇರಿದ್ದರು.

ಇದಾದ ನಂತರ ಮಾರಣ್ಣ 1938 ಮಾಗಡಿ ಸ್ಥಳೀಯ ಚಯನಾವಣೆಯಲ್ಲಿ ಗೆಲವು ಸಾಧಿಸುತ್ತಾರೆ. ಇದಾದ ನಂತರ ಮೈಸೂರು ಸಂಸ್ಥಾನದ ಮಾಗಡಿ ಕ್ಷೇತ್ರ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋಲು ಕಂಡ ಮಾರಣ್ಣ 1957 ಬೈ ಎಲೆಕ್ಷನ್‌ನಲ್ಲಿ ಜಯಶೀಲರಾಗುತ್ತಾರೆ.

ಕೇವಲ ರಾಜಕೀಯ ಅಷ್ಟೇ ಅಲ್ಲದೆ ಪತ್ರಕರ್ತರು ಆಗಿದ್ದ ಮಾರಣ್ಣ ಪ್ರಜಾವಾಣಿ ಮತ್ತು ಕನ್ನಡ ಡೈಲಿ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಜೊತೆಗೆ ಕೆಇಬಿ ಬೋರ್ಡ್ ಅಧ್ಯಕ್ಷರಾಗಿದ್ದ ಮಾರಣ್ಣ ಅಂದಿನ ಕಾಲಕ್ಕೆ ಮನಸ್ಸು ಮಾಡಿದ್ರೆ ಇಡೀ ಊರಿಗೆ ಸರ್ಕಾರಿ ಕೆಲಸ ಕೊಡಿಸಬಹುದಾಗಿತ್ತು. ಮಾರಣ್ಣ ಹಣ ಮಾಡಬೇಕು ಅಂದು ಕೊಂಡಿದ್ರು. ತಾಲೂಕಿನ ತುಂಬೆಲ್ಲಾ ಆಸ್ತಿ ಮಾಡಬಹುದಿತ್ತು. ಆದ್ರೆ ಮಾರಣ್ಣ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಿಂದ ಬಂದು ಜನ ಸೇವೆಗೆ ತಮ್ಮ ಜೀವನವನ್ನ ಮೂಡುಪಿಟ್ಟಿದ್ರು.

ಆದ್ರೆ ಇಂದಿನ ಅವರ ಮನೆ ಸ್ಥಿತಿ ನೋಡಿದ್ರೆ ನಿಜಕ್ಕೂ ಎದೆ ಕುಸಿಯುತ್ತದೆ. ಸರ್ಕಾರ ಮತ್ತು ಸ್ಥಳೀಯ ಪಂಚಾಯ್ತಿಯಿಂದ ನಿರ್ಲಕ್ಷ್ಯಕ್ಕೊಳಗಾಗಿರೋ ಈ ಸ್ವಾತಂತ್ರ್ಯ ಸೇನಾನಿಯ ಮನೆ ಮತ್ತು ಸಮಾಧಿಯತ್ತ ಸರ್ಕಾರ ಕಣ್ಣು ಹಾಯಿಸಬೇಕಿದೆ. ಅಮೃತ ಮಹೋತ್ಸವಕ್ಕೆ ಮನೆ ಮೇಲೆ ಬಾವುಟ ಹಾರಿಸುವುದರ ಜೊತೆಗೆ ಇಂಥ ಸ್ಥಳಗಳನ್ನ ಜೀರ್ಣೋದ್ಧಾರ‌ ಮಾಡಿ ಉಳಿಸಿಕೊಂಡರೆ ಮುಂದಿನ ಪೀಳಿಗೆಗೆ ಉಪಯುಕ್ತವಾಗುತ್ತದೆ ಎನ್ನುವುದೇ ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Nagesh Gaonkar
PublicNext

PublicNext

14/08/2022 10:53 pm

Cinque Terre

48.2 K

Cinque Terre

2

ಸಂಬಂಧಿತ ಸುದ್ದಿ