ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಜಿಲ್ಲಾಸ್ಪತ್ರೆ ಮಾಡಿಕೊಡುವುದು ನಮ್ಮ ಕರ್ತವ್ಯ. ಈ ಬಗ್ಗೆ ಸಚಿವ ಸಂಪುಟದ ಅನುಮೋದನೆ ಪಡೆದು ಕಾರ್ಯಗತ ಮಾಡ್ತೇವೆ. ಹಾಗೆಯೇ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡ್ಬೇಕೆಂಬ ಗುರಿ ಇದ್ದು, ಅದನ್ನೂ ಪೂರೈಸುತ್ತೇವೆ ಎಂದು ಸಚಿವ ಡಾ.ಸುಧಾಕರ್ ದೊಡ್ಡಬಳ್ಳಾಪುರದಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಪಿಪಿಪಿ ಮಾಡೆಲ್ ನಲ್ಲಿ ನೂತನವಾಗಿ ಆಸ್ಪತ್ರೆ ನಿರ್ಮಿಸುವುದು
ನಮ್ಮ ನಿಲುವು. ಪ್ರತೀ ಜಿಲ್ಲೆಯಲ್ಲಿ ಈಗಾಗಲೇ ಖಾಸಗಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಎಲ್ಲಿ ಸರ್ಕಾರಿ ಕಾಲೇಜುಗಳಿಲ್ಲವೋ ಅಂತಹ ಜಿಲ್ಲೆಗಳಲ್ಲಿ ಕಾಲೇಜು ನಿರ್ಮಿಸಲಾಗುವುದು ಎಂದರು.
ಏರ್ ಪೋರ್ಟ್ ನಲ್ಲಿ ಕೊರೊನಾ ಟೆಸ್ಟಿಂಗ್ ಗೋಲ್ ಮಾಲ್ ಬಗ್ಗೆ ದೂರು ಬರ್ತಿವೆ. ಒಂದು ಪ್ರಕರಣ ಆದರೆ ಅದು ಪ್ರತಿನಿತ್ಯವೂ ಆಗ್ತದೆ ಎನ್ನಲಾಗುವುದಿಲ್ಲ. ಟೆಕ್ನಿಕಲ್ ಕಾರಣಗಳಿಂದ ಮಾಹಿತಿ ತಪ್ಪಾಗಿರಬಹುದು ಅಥವಾ ರಿಪೋರ್ಟ್ ತಪ್ಪಾಗಿ ಬಂದಿರಬಹುದು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.
ದೊಡ್ಡಬಳ್ಳಾಪುರದಲ್ಲಿ ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿದ ಸುಧಾಕರ್ ಅವರಿಗೆ ಸಚಿವರಾದ ಎಂಟಿಬಿ ನಾಗರಾಜ್, ಬಿ.ಸಿ.ಪಾಟೀಲ್, ಶಾಸಕ ವೆಂಕಟರಮಣಪ್ಪ ಸಾಥ್ ನೀಡಿದರು. ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ಕೃಷಿ ಉಪಕರಣ ವಿತರಿಸಲಾಯಿತು.
PublicNext
27/01/2022 09:53 pm