ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಲೇಶ್ವರಂ ಎಕ್ಸ್‌ಪ್ರೆಸ್‌ ಕ್ಲಿನಿಕ್ ದೇಶಕ್ಕೆ ಮಾದರಿ: ಸಿಎಂ ಬೊಮ್ಮಾಯಿ

ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾರಂಭಿಸಿರುವ ಎಕ್ಸ್‌ಪ್ರೆಸ್‌ ಕ್ಲಿನಿಕ್ ದೇಶಕ್ಕೆ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ನಗರದ 20 ಕಡೆಗಳಲ್ಲಿ ಇದೆ ಮಾದರಿಯ ಕ್ಲಿನಿಕ್ ಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಹೈಟೆಕ್ ಹಾಸ್ಪಿಟಲ್, ಎಕ್ಸ್‌ಪ್ರೆಸ್‌ ಕ್ಲಿನಿಕ್ ಹಾಗೂ ಸ್ಕೈ ವಾಕ್ ಉದ್ಘಾಟಿಸಿ ಮಾತನಾಡಿದ ಅವರು, ಸಚಿವ ಡಾ. ಅಶ್ವತ್ಥ್ ನಾರಾಯಣ ಅವರು ಮಾದರಿ ಡೈಗ್ನೊಸ್ಟಿಕ್ ಕೇಂದ್ರಗಳನ್ನು ಮಾಡಿದ್ದಾರೆ . ಮಣಿಪಾಲ್ ಸಂಸ್ಥೆಯ ಸಹಯೋಗದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಬಡವರು ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದ್ದಾರೆ. ಎಪಿಎಲ್ ನವರಿಗೆ 30 % ದರದಲ್ಲಿ ಬಿಪಿಎಲ್ ನವರಿಗೆ ಅತ್ಯಂತ ಕಡಿಮೆ ದರದಲ್ಲಿ ತಪಾಸಣೆ ಮಾಡಲು ದರ ನಿಗದಿ ಮಾಡಿದ್ದಾರೆ. ಬಹಳ ಅದ್ಬುತ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ನಮ್ಮ ದೇಶದ ಆರೋಗ್ಯ ಸೇವೆ ಉತ್ತಮವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಮಾನ್ ಭಾರತದ ಮೂಲಕ ಎಲ್ಲರಿಗೂ ಆರೋಗ್ಯ ಸೇವೆ ದೊರೆಯುವಂತೆ ಮಾಡಿದ್ದಾರೆ . ಆಯುಷ್ಮಾನ್ ಭಾರತ ಸರಿಯಾಗಿ ಬಳಕೆ ಮಾಡಿದ್ದರೆ ಸರ್ಕಾರಿ ಆಸ್ಪತ್ರೆಗಳು ಲಾಭದಾಯಕವಾಗುತ್ತವೆ.

ನಗರದ ನಾಲ್ಕು ಕಡೆಗಳಲ್ಲಿ ಜಯದೇವ ಆಸ್ಪತ್ರೆ ತೆರೆಯಲು ತೀರ್ಮಾನಿಸಲಾಗಿದೆ.ಈಗಾಗಲೆ ಮಲ್ಲೇಶ್ವರಂ ನಲ್ಲಿ ಆರಂಭವಾಗಿದೆ. ಬರುವ ದಿನಗಳಲ್ಲಿ 243 ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಸಮಗ್ರ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಇದು ಮಾದರಿಯಾಗಿದೆ ಎಂದು ತಿಳಿಸಿದರು.

Edited By : Somashekar
PublicNext

PublicNext

18/09/2022 05:57 pm

Cinque Terre

27.68 K

Cinque Terre

1

ಸಂಬಂಧಿತ ಸುದ್ದಿ