ಬೆಂಗಳೂರು: ಮೊನ್ನೆ ರಾಜ್ಯ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾಗ ಕೊಮ್ಮಘಟ್ಟದಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಸಚಿವರೆಲ್ಲರು ಭಾಗವಹಿಸಿದ್ದರು. ಈ ಮೊದಲು ಯಲಹಂಕ ಏರ್‌ಬೇಸ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಎಂಟಿಬಿ ನಾಗರಾಜ್ ತೆರಳಿದ್ದರು. ಈ ವೇಳೆ ಮೋದಿ ಹಾಗೂ ಎಂಟಿಬಿ ನಾಗರಾಜ್ ಮಧ್ಯೆ ಆರೋಗ್ಯದ ಗುಟ್ಟಿನ ಚರ್ಚೆ ನಡೆದಿತ್ತು. ಈ ವೇಳೆ ಸಚಿವ ಎಂ.ಟಿ.ಬಿ ಯೋಗ ಮತ್ತು ಸ್ವಿಮ್ಮಿಂಗ್ ಮಾಡುತ್ತೇನೆ ಎಂದು ಹಿಂದಿಯಲ್ಲಿ ಉತ್ತರಿಸಿದರು. ಇದನ್ನು ಕೇಳಿದ ಮೋದಿ ಅಚ್ಚಾ ಹೈ ಎಂದು ನಕ್ಕು ತೆರಳಿದರು.
ಇದೀಗ ಸಚಿವ ಎಂ.ಟಿ.ಬಿ ನಾಗರಾಜ್ ಅವರು ತಾವು ಯೋಗ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸರಾಗವಾಗಿ ಮೈಯನ್ನು ಬಗ್ಗಿಸುವ ಭಂಗಿ ಅಚ್ಚರಿ ಮೂಡಿಸುವಂತಿದೆ.
PublicNext
25/06/2022 08:30 am