ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊರೊನಾ ರೂಲ್ಸ್‌ ಬ್ರೇಕ್- ಮಾರ್ಷಲ್‌ಗಳಿಂದ 15 ಕೋಟಿ ರೂ. ದಂಡ ವಸೂಲಿ

ಬೆಂಗಳೂರು: ಕೋವಿಡ್​ ನಿಯಮ ಉಲ್ಲಂಘಿಸಿದವರಿಂದ ಈವರೆಗೆ ಸುಮಾರು ಸಿಲಿಕಾನ್ ಸಿಟಿ ಬೆಂಗಳೂರಿನ 198 ವಾರ್ಡ್‌​ಗಳಿಂದ ಈವರೆಗೆ ಸುಮಾರು 15 ಕೋಟಿ ರೂ. ಕೋವಿಡ್​​ ಸಂಬಂಧಿಸಿದ ದಂಡ ವಸೂಲಿ ಮಾಡಲಾಗಿದೆ.

ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದು, ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಬೇಕೆಂದು ರಾಜ್ಯ ಸರ್ಕಾರವು ಮಾರ್ಷ​ಲ್​​ಗಳನ್ನು ನೇಮಿಸಿತ್ತು. ಸಿಲಿಕಾನ್​​​​ ಸಿಟಿಯ 198 ವಾರ್ಡ್​ಗಳಲ್ಲಿ 260ಕ್ಕೂ ಹೆಚ್ಚು ಮಾರ್ಷಲ್​​ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಕೋವಿಡ್ ರೂಲ್ಸ್ ಬ್ರೇಕ್​​ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತಿ ವಾರ್ಡ್​ನಲ್ಲೂ ಮಾರ್ಷಲ್​ಗಳು ಎಡೆಬಿಡದೆ ಗಸ್ತು ತಿರುಗುತ್ತಿದ್ದಾರೆ. ನಗರದಲ್ಲಿ ಕಳೆದ 21 ತಿಂಗಳಲ್ಲಿ 14,66,55,441 ರೂ.ದಂಡ ಸಂಗ್ರಹ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

29/01/2022 08:31 am

Cinque Terre

18.55 K

Cinque Terre

1

ಸಂಬಂಧಿತ ಸುದ್ದಿ